ನವದೆಹಲಿ: ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಷನ್ (ಎನ್ ಸಿ ಆರ್ ಟಿ ಸಿ)ನಲ್ಲಿ ಖಾಲಿ ಇರುವ 72 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ 72 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಈಗ ಮುಂದೂಡಿಕೆ ಮಾಡಲಾಗಿದೆ. ಇದಕ್ಕೂ ಮೊದಲು ಏಪ್ರಿಲ್ 24 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಈಗ ಇದನ್ನು ಮೇ 9ರವರೆಗೆ ವಿಸ್ತರಿಸಲಾಗಿದೆ. ಹಾಗಾಗಿ, ಅಭ್ಯರ್ಥಿಗಳು ದಿನಾಂಕ ವಿಸ್ತರಣೆಯನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ಜೂನಿಯರ್ ಎಂಜಿನಿಯರ್, ಅಸಿಸ್ಟಂಟ್, ಪ್ರೋಗ್ರಾಮಿಂಗ್ ಅಸೋಸಿಯೇಟ್, ಜೂನಿಯರ್ ಮೆಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನಿಯರ್ ಎಂಜಿನಿಯರ್ ವಿಭಾಗದಲ್ಲಿ 36 ಹುದ್ದೆಗಳು ಖಾಲಿ ಇವೆ. ಇನ್ನು, ಜೂನಿಯರ್ ಮೆಂಟೇನರ್ ವಿಭಾಗದಲ್ಲಿ 28, ಪ್ರೋಗ್ರಾಮಿಂಗ್ ಅಸೋಸಿಯೇಟ್ ವಿಭಾಗದಲ್ಲಿ 4 ಹಾಗೂ ಅಸಿಸ್ಟಂಟ್ ವಿಭಾಗದಲ್ಲಿ 4 ಹುದ್ದೆಗಳು ಖಾಲಿ ಇವೆ.
ಸಂಬಳ ಎಷ್ಟು?
ಜೂನಿಯರ್ ಎಂಜಿನಿಯರ್ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ 22,800-75,850 ರೂಪಾಯಿ ಸಂಬಳ ದೊರೆಯಲಿದೆ. ಪ್ರೋಗ್ರಾಮಿಂಗ್ ಅಸೋಸಿಯೇಟ್ ಹುದ್ದೆಗೆ 22,800-75,850 ರೂಪಾಯಿ ಸಂಬಳ ನೀಡಲಾಗುತ್ತದೆ. ಅಸಿಸ್ಟಂಟ್ ಹುದ್ದೆಗೆ ಆಯ್ಕೆಯಾದವರಿಗೆ 20,250-65,500 ರೂ. ಹಾಗೂ ಜೂನಿಯರ್ ಮೆಂಟೇನರ್ ಹುದ್ದೆಗೆ ಆಯ್ಕೆಯಾದವರಿಗೆ 18,250-59,200 ಸಂಬಳ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಿದವರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಮೆಡಿಕಲ್ ಫಿಟ್ ನೆಸ್ ಪರೀಕ್ಷೆ (ಭಾರತೀಯ ರೈಲ್ವೆ ಮಾನದಂಡಗಳ ಪ್ರಕಾರ) ನಡೆಸಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ನಂತರ ಮೊದಲಿಗೆ ಎರಡು ವರ್ಷ ಪ್ರೊಬೇಷನ್ ಅವಧಿಯಲ್ಲಿ ಕೆಲಸ ಮಾಡಬೇಕು. ನಂತರ ಕಾಯಂ ಮಾಡಲಾಗುತ್ತದೆ.
ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ, ಹೋಟೆಲ್ ಮ್ಯಾನೇಜ್ ಮೆಂಟ್, ಐಟಿಐ ಮುಗಿಸಿದವರಿಗೆ ಆಯಾ ವಿದ್ಯಾರ್ಹತೆ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರಿಗೆ 25 ವರ್ಷದ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. www.ncrtc.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.