ಬೆಂಗಳೂರು: ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋದಲ್ಲಿ ಖಾಲಿ ಇರುವ 184 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಇನ್ಸ್ ಪೆಕ್ಟರ್, ಡ್ರೈವರ್ ಸೇರಿ ಒಟ್ಟು 184 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ದೇಶಾದ್ಯಂತ ಕಾರ್ಯನಿರ್ವಹಿಸಲು ಇಚ್ಛಿಸುವವರು ಅರ್ಜಿ ಸ್ಲಲಿಸಬಹುದಾಗಿದೆ. ಜೂನ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ
ಸಂಸ್ಥೆ: ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (NCB)
ಒಟ್ಟು ಹುದ್ದೆಗಳು: 184
ಹುದ್ದೆ ಹೆಸರು : ಇನ್ಸ್ ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಡ್ರೈವರ್, ಅಸಿಸ್ಟೆಂಟ್, ಯುಡಿಸಿ, ಪ್ರೋಗ್ರಾಮರ್, ಸಿಸ್ಟಂ ಅನಾಲಿಸ್ಟ್
ವೇತನ ಎಷ್ಟು?
ಆಯಾ ಹುದ್ದೆಗಳಿಗೆ ಅನುಗುಣವಾಗಿ ವೇತನ ನೀಡಲಾಗುತ್ತದೆ. ಇನ್ಸ್ ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಹೊಂದಿದವರಿಗೆ ಮಾಸಿಕ 34,800 ರೂ.ವರೆಗೆ ಸಂಬಳ ನೀಡಲಾಗುತ್ತದೆ. ಹಾಗೆಯೇ, ಡ್ರೈವರ್ ಹುದ್ದೆಗೆ 20,200 ರೂ.ವರೆಗೆ, ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ನೇಮಕಗೊಂಡವರಿಗೆ 34,800 ರೂ.ವರೆಗೆ ಸಂಬಳ ನೀಡಲಾಗುತ್ತದೆ. ಪ್ರೋಗ್ರಾಮರ್ ಹುದ್ದೆಗೆ 34,800 ರೂ. ಹಾಗೂ ಸಿಸ್ಟಂ ಅನಾಲಿಸ್ಟ್ ಹುದ್ದೆಗಳಿಗೆ 39,100 ರೂ.ವರೆಗೆ ಸಂಬಳ ನೀಡಲಾಗುತ್ತದೆ.
ಯಾವ ಹುದ್ದೆ ಎಷ್ಟು ಖಾಲಿ?
ಇನ್ಸ್ ಪೆಕ್ಟರ್ : 8
ಸಬ್ ಇನ್ಸ್ ಪೆಕ್ಟರ್ : 1
ಡ್ರೈವರ್ : 1
ಇನ್ಸ್ ಪೆಕ್ಟರ್-MHA : 94
ಸಬ್ ಇನ್ಸ್ಪೆಕ್ಟರ್-MHA : 29
ಇನ್ಸ್ ಪೆಕ್ಟರ್ (NWR) : 16
ಸಬ್ ಇನ್ಸ್ ಪೆಕ್ಟರ್ (NWR) : 16
ಅಸಿಸ್ಟಂಟ್ : 3
ಅಪ್ಪರ್ ಡಿವಿಷನ್ ಕ್ಲರ್ಕ್ (UDC) : 2
ಸರ್ವೆಲನ್ಸ್ ಅಸಿಸ್ಟೆಂಟ್ : 11
ಪ್ರೋಗ್ರಾಮರ್ : 2
ಸಿಸ್ಟಂ ಅನಾಲಿಸ್ಟ್ : 1 ‘
ಎಸ್ಸೆಸ್ಸೆಲ್ಸಿಯಿಂದ ಬಿ.ಇ, ಬಿ.ಟೆಕ್, ಎಂ.ಟೆಕ್ ಸೇರಿ ಹಲವು ವಿದ್ಯಾರ್ಹತೆಗಳಿಗೆ ಅನುಗುಣವಾಗಿ ಆಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. 56 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ದಾಖಲೆ ಪರಿಶೀಲನೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಆಫ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವವರು ಎನ್ ಸಿ ಬಿ ಜೋನಲ್ ಯೂನಿಟ್, ಯಲಹಂಕ, ಬೆಂಗಳೂರು-63 ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. https://www.keralagovtjobs.in/wp-content/uploads/2025/05/08-Inspector-Bangalore-Unit-Posts-Advt-Details-Application-Form-NCB.pdf ಗೆ ಭೇಟಿ ನೀಡುವ ಮೂಲಕ ಅರ್ಜಿ ಡೌನ್ ಲೋಡ್ ಮಾಡಿಕೊಳ್ಳಬಹುದು.



















