ಬೆಂಗಳೂರು: 6 ನಕ್ಸಲರು ತಮ್ಮ ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಎದುರು ಶರಣಾಗಿದ್ದರು. ನಾಳೆ ಅವರ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾಗಲಿದೆ.
ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರು ಸುಂದರಿ, ರಾಯಚೂರು ಮೂಲದ ಮಾರಪ್ಪ ಅರೋಲಿ, ಕೆ. ವಸಂತ, ಟಿ.ಎನ್. ಜೀಶಾ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿದ್ದರು. ಜ. 8ರಂದು 6 ಜನ ನಕ್ಸಲರು ಶರಣಾಗಿದ್ದರು.
ಶರಣಾದ ನಕ್ಸಲರನ್ನು ಪೊಲೀಸ್ ಕಸ್ಟಡಿಗೆ(Police custody) ಒಪ್ಪಿಸಲಾಗಿತ್ತು. ಆ 6 ನಕ್ಸಲರ ಪೊಲೀಸ್ ಕಸ್ಟಡಿ ಅವಧಿ ನಾಳೆಗೆ ಅಂತ್ಯವಾಗುತ್ತಿದೆ. ಹೀಗಾಗಿ ನಾಳೆ ಎನ್ಐಎ ಕೋರ್ಟ್ ಗೆ ನಕ್ಸಲರನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. 7 ದಿನ ಎನ್ಐಎ ಕೋರ್ಟ್ ಚಿಕ್ಕಮಗಳೂರು ಪೊಲೀಸ್(police) ಕಸ್ಟಡಿಗೆ ನೀಡಿತ್ತು.
ಕೇರಳ ಪೊಲೀಸರು ಆ ನಕ್ಸಲರನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡುವ ಸಾಧ್ಯತೆಯಿದೆ. ಎನ್ಐಎ ಅಧಿಕಾರಿಗಳು ಕೂಡ 6 ನಕ್ಸಲರ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.