ಉಡುಪಿ: ನಕ್ಸಲ್ ಲಕ್ಷ್ಮೀ ತೊಂಬಟ್ಟು ಪೊಲೀಸರಿಗೆ(police) ಶರಣಾಗಿದ್ದು, ಈ ಮೂಲಕ ಕರ್ನಾಟಕ ನಕ್ಸಲ್ ಮುಕ್ತವಾದಂತಾಗಿದೆ.
ಲಕ್ಷ್ಮೀ ತೊಂಬಟ್ಟು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗಿದ್ದಾಳೆ. ಶರಣಾಗತಿಗೆ ಸಂಬಂಧಿಸಿದಂತೆ ಭಾನುವಾರ ಉಡುಪಿ(udupi) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಲಕ್ಷ್ಮೀ ತೊಂಬಟ್ಟು ಆಗಮಿಸಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ್ದಳು. ಅಲ್ಲದೇ, ಇಂದು ಶರಣಾಗುವುದಾಗಿ ಹೇಳಿದ್ದಳು.
ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ(Rehabilitation Committee) ಸದಸ್ಯ ಶ್ರೀಪಾಲ್(Sripal) ಜೊತೆ ನಕ್ಸಲ್ ಲಕ್ಷ್ಮಿ,(laxmi) ಎಸ್ಪಿ ಕಚೇರಿಗೆ ಆಗಮಿಸಿ ಶರಣಾಗಿದ್ದಾಳೆ. ಈಗಾಗಲೇ ಅವರ ಶರಣಾಗತಿ ಕಾನೂನು (law)ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಭದ್ರತೆಯೊಂದಿಗೆ ಡಿಸಿ ಕಚೇರಿಗೆ ಲಕ್ಷ್ಮಿಯನ್ನು ಪೊಲೀಸರು ಕರೆದೊಯ್ಯಿದ್ದಾರೆ. ಶರಣಾದ ನಕ್ಸಲ್ ಜೊತೆ ಆಕೆಯ ಸಹೋದರ ಮತ್ತು ಬಂಧುಗಳು ಕೂಡ ಹಾಜರಿದ್ದರು.