ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ, ಗ್ರಾಹಕ ಉತ್ಪನ್ನಗಳ ಗುಣಮಟ್ಟ ತಪಾಸಣೆ ಸೇರಿ ಹಲವು ಕಾರಣಗಳಿಗಾಗಿ ಸ್ಥಾಪಿಸಿರುವ ನ್ಯಾಷನಲ್ ಟೆಸ್ಟ್ ಹೌಸ್ ನಲ್ಲಿ ಖಾಲಿ ಇರುವ 25 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. 25 ಸೀನಿಯರ್ ಹಾಗೂ ಜೂನಿಯರ್ ಯಂಗ್ ಪ್ರೊಫೇಷನಲ್ ಹುದ್ದೆಗಳನ್ನು ಭರ್ತಿ (National Test House Recruitment 2026) ಮಾಡಿಕೊಳ್ಳಲಾಗುತ್ತಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರ
ನೈಮಕಾತಿ ಸಂಸ್ಥೆ: ನ್ಯಾಷನಲ್ ಟೆಸ್ಟ್ ಹೌಸ್
ಒಟ್ಟು ಹುದ್ದೆ: 25
ಉದ್ಯೋಗ ಸ್ಥಳ: ದೇಶಾದ್ಯಂತ
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 18
ಪಶ್ಚಿಮ ಬಂಗಾಳದ ಕೋಲ್ಕತ್ತ, ಅಸ್ಸಾಂನ ಗುವಾಹಟಿ, ರಾಜಸ್ಥಾನದ ಜೈಪುರ, ಉತ್ತರ ಪ್ರದೇಶದ ಘಾಜಿಯಾಬಾದ್, ಮಹಾರಾಷ್ಟ್ರದ ಮುಂಬೈ ಹಾಗೂ ತಮಿಳುನಾಡಿನ ಚೆನ್ನೈನಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಸ್ನಾತಕೋತ್ತರ ಪದವಿ, ಬಿಇ, ಬಿ.ಟೆಕ್, ಎಂಬಿಎ ಕೋರ್ಸ್ ಗಳನ್ನು ಮುಗಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 70 ಸಾವಿರ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರು ಮೊದಲಿಗೆ nth.gov.in ಭೇಟಿ ನೀಡಿ ಅಧಿಸೂಚನೆ ಓದಬೇಕು. ಬಳಿಕ ಅರ್ಜಿಗಳು ಹಾಗೂ ದಾಖಲೆಗಳ ಸಾಫ್ಟ್ ಕಾಪಿಗಳನ್ನು ಈ ಕೆಳಗಿನ ಆಯಾ ವಿಭಾಗಗಳ ಮೇಲ್ ಐಡಿಗೆ ಕಳುಹಿಸಬೇಕು.
ಇ-ಮೇಲ್ ವಿಳಾಸಗಳು
DGCO, Ghaziabad dg-office@nth.gov.in
NTH Ghaziabad director-gzb@nth.gov.in
HQ Kolkata dg-office@nth.gov.in
NTH Kolkata director-kol@nth.gov.in
NTH Chennai director-chn@nth.gov.in
NTH Mumbai director-mum@nth.gov.in
NTH Jaipur director-jai@nth.gov.in
NTH Guwahati director-guw@nth.gov.in
ಇದನ್ನೂ ಓದಿ: ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ 132 ಹುದ್ದೆಗಳ ನೇಮಕ : 77 ಸಾವಿರ ರೂ. ಸಂಬಳ



















