ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚುವರಿ ಸುಂಕ ಹೇರಿಕೆಯ ಎಚ್ಚರಿಕೆಯ ನಡುವೆಯೇ ಮೇಕ್ ಇನ್ ಇಂಡಿಯಾಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಇಂದು(ಮಂಗಳವಾರ, ಆ.26) ಸುಜುಕಿ ಮೋಟಾರ್ ಪ್ಲಾಂಟ್ ನ ಹೈಬ್ರಿಡ್ ಬ್ಯಾಟರಿ Electrodes ಉತ್ಪಾದನೆಯನ್ನು ಉದ್ಘಾಟಿಸಿದ ಬಳಿಕ ಮಾರುತಿ ಸುಜುಕಿಯ ಮೊದಲ ಜಾಗತಿಕ ವನ್ನು ಮಾರುಕಟ್ಟೆ ಪ್ರವೇಶಿಸಲು ಅನಾವರಣಗೊಳಿಸಿದರು.
ಇ-ವಿಟಾರಾ ಯುರೋಪ್, ಜಪಾನ್ ಸೇರಿದಂತೆ 100ಕ್ಕೂ ಅಧಿಕ ದೇಶಗಳಿಗೆ ರಫ್ತುಗೊಳ್ಳಲಿದೆ ಎಂದು ವರದಿ ವಿವರಿಸಿದೆ.
ಇ ವಿಟಾರಾ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್ ಖಾತೆ ʼಎಕ್ಸ್ʼ ನಲ್ಲಿ ಪ್ರಧಾನಿ ಮೋದಿ ಅವರು, ಮಾರುತಿ ಸುಜುಕಿ ಇ-ವಿಟಾರಾದ ಮೂಲಕ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಇಡುವ ಈ ದಿನ ಭಾರತಕ್ಕೆ ವಿಶೇಷ ದಿನವಾಗಿದೆ. ಇ-ವಿಟಾರಾ ಬ್ಯಾಟರಿ ಇಲೆಕ್ಟಿಕ್ ವಾಹನವಾಗಿದ್ದು, ಇದು ದೇಶಿ ನಿರ್ಮಾಣವಾಗಿದೆ. ಇದು ನೂರಕ್ಕೂ ಅಧಿಕ ದೇಶಗಳಿಗೆ ರಫ್ತಾಗಲಿದೆ ಎಂದು ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸುಜುಕಿ, ತೋಷಿಬಾ ಮತ್ತು ಡೆನ್ನೋ ಸ್ಥಾಪಿಸಿದ ಲಿಥಿಯಂ-ಐಯಾನ್ ಬ್ಯಾಟರಿ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು.
ಇದು ಸರಣಿ ಹಬ್ಬಗಳ ಕಾಲವಾಗಿದೆ. ಗಣೇಶ ಚತುರ್ಥಿ ಬೆನ್ನಲ್ಲೇ ನವರಾತ್ರಿ, ವಿಜಯದಶಮಿ, ದೀಪಾವಳಿ ಹಬ್ಬಗಳು ಬರುತ್ತಿವೆ. ಈ ಸಂಭ್ರಮಾಚರಣೆ ನಮ್ಮ ಸಂಸ್ಕೃತಿಯಾಗಿದೆ. ಆದರೆ ಅದರ ಜತೆಗೆ ನಮ್ಮ ಸ್ವಾವಲಂನೆಯನ್ನೂ ಸಂಭ್ರಮಿಸಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ನಾನು ನಿಮ್ಮಲ್ಲಿ ಮನವಿ ಮಾಡುವುದೇನೆಂದರೆ ನಾವು ಯಾವುದೇ ವಸ್ತುಗಳನ್ನು ಖರೀದಿಸಿದರು ಅದು ಮೇಡ್ ಇನ್ ಇಂಡಿಯಾ ಆಗಿರಬೇಕೆಂದು ಪ್ರಧಾನಿ ಮೋದಿ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.