ಬೆಂಗಳೂರು: ಠಾಣೆ ಚಿತ್ರದ ಬಾಳಿನಲ್ಲಿ ಭರವಸೆಯ ಬೆಳಕು ಚಿತ್ರದ ಹಾಡನ್ನು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಮೆಚ್ಚಿಕೊಂಡು ಹಾರೈಸಿದ್ದಾರೆ.
ಪಿಸಿಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ, ಎಸ್.ಭಗತ್ ರಾಜ್ ನಿರ್ದೇಶನದ ಹಾಗೂ ಪ್ರವೀಣ್ ನಾಯಕನಾಗಿ ನಟಿಸಿರುವ “ಠಾಣೆ” ಚಿತ್ರದ ಹಾಡನ್ನು ಮೆಚ್ಚಿಕೊಂಡರು. ಈ ಹಾಡನ್ನು ಮಜಾ ಟಾಕೀಸ್ ಖ್ಯಾತಿಯ ರೆಮೊ ಬರೆದಿದ್ದಾರೆ. ಈಗ ಈ ಹಾಡು ಟ್ರೆಂಡ್ ನಲ್ಲಿ ಸ್ಥಾನ ಪಡೆದಿದೆ. ಈ ಹಾಡಿಗೆ ಮಾನಸ ಹೊಳ್ಳ ಸಂಗೀತ ಸಂಯೋಜಿಸಿ, ಜ್ಞಾನ, ಅನುಷ್ಕ, ಜನ್ಯ ಆದರ್ಶ್ ಹಾಗೂ ಮೌಲ್ಯ ಅಚಿಂತ್ಯ ಎಂಬ ಬಾಲ ಪ್ರತಿಭೆಗಳು ಹಾಡಿದ್ದಾರೆ.

ಬಾಲ ಪ್ರತಿಭೆಗಳು ಹಾಡಿರುವ “ಠಾಣೆ” ಚಿತ್ರದ ಅರ್ಥಗರ್ಭಿತ ಈ ಹಾಡನ್ನು ನಾನು ದಿನಕ್ಕೆ ನಾಲ್ಕೈದು ಬಾರಿ ಕೇಳುತ್ತಲೇ ಇರುತ್ತೇನೆ. ಅಷ್ಟು ಇಷ್ಟವಾಗಿದೆ ನನಗೆ ಈ ಹಾಡು. ಮಕ್ಕಳು ತುಂಬಾ ಚೆನ್ನಾಗಿ ಹಾಡಿದ್ದಾರೆ ಎಂದು ನಾರಾಯಣಗೌಡ ಹೊಗಳಿದ್ದಾರೆ. “ಠಾಣೆ” ಚಿತ್ರತಂಡದ ಸದಸ್ಯರು ಈ ವೇಳೆ ಹಾಜರಿದ್ದರು.