ಬೆಂಗಳೂರು: ನಲಪಾಡ್ ಆಪ್ತ ಹಾಗೂ ಕಾಂಗ್ರೆಸ್ ಯುವ ಮುಖಂಡನ ಗ್ಯಾಂಗ್ ನಿಂದ ನೈತಿಕ ಪೊಲೀಸ್ ಗಿರಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಯೂತ್ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಅಬ್ಬಾಸ್ ಅಂಡ್ ಗ್ಯಾಂಗ್ ನಿಂದ ಅಮಾಯಕರೊಬ್ಬರ ಮೇಲೆ ದರ್ಪ ನಡೆದಿರುವ ಘಟನೆ ನಡೆದಿದೆ. ಅಬ್ಬಾಸ್ ಅಂಡ್ ಗ್ಯಾಂಗ್ ನಿಂದ ಹಲ್ಲೆ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪಾಪಿಗಳು, ಯುವಕನ ಮೇಲೆ ಪೈಪ್ ನಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಅಬ್ಬಾಸ್, ಸುಲ್ತಾನ್ ಸೇರಿದಂತೆ ನಾಲ್ವರಿಂದ ಹಲ್ಲೆ ನಡೆದಿದೆ. ಮನೆಯೊಂದರ ಬೇಸ್ಮೆಂಟ್ ಕಾರ್ ಪಾರ್ಕಿಂಗ್ ನಲ್ಲಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಯುವಕ ಕಾಲಿಗೆ ಬೀಳ್ತೀನಿ ಬಿಟ್ಟುಬಿಡಿ ಎಂದು ಕೇಳಿಕೊಂಡರೂ ಪಾಪಿಗಳು ಮಾತ್ರ ಥಳಿಸಿದ್ದಾರೆ.
ಅಮಾಯಕನ ಕೈ ಕಾಲು, ತಲೆ ಸೇರಿದಂತೆ ಸಿಕ್ಕ ಸಿಕ್ಕ ಕಡೆ ಪೈಪ್ ನಿಂದ ಹಲ್ಲೆ ನಡೆಸಿದ್ದಾರೆ. ಇಡೀ ಬೇಸ್ಮೆಂಟ್ ನಲ್ಲಿ ಹೊಡೆತದಿಂದ ತಪ್ಪಿಸಿಕೊಳ್ಳಲು ಯುವಕ ಯತ್ನಿಸಿದ್ದಾನೆ. ಆದರೆ, ನಾಲ್ವರೂ ಸೇರಿ ಪೈಪ್ ನಿಂದ ಸಿಕ್ಕ ಸಿಕ್ಕ ಕಡೆ ಹಲ್ಲೆ ನಡೆಸಿದ್ದಾರೆ. ಹವಾ ಕ್ರಿಯೇಟ್ ಮಾಡಲು ವಿಡಿಯೋ ಮಾಡಿಸಿ ವೈರಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಪೊಲೀಸರನ್ನು ಆಗ್ರಹಿಸಿದ್ದಾರೆ.