ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇವೆ. ಈಗಂತೂ ಹೆಣ್ಣುಮಕ್ಕಳಿಗೆ ಸೇಫ್ಟಿ ಅನ್ನುವುದೇ ಇಲ್ಲಾ. ಐದು ವರ್ಷದ ಮಗುವಿನಿಂದ ಹಿಡಿದು 60 ವರ್ಷದ ವೃದ್ದೆಯ ಮೇಲೂ ಕೂಡ ಅತ್ಯಾಚಾರ ಮಾಡಲಾಗುತ್ತಿದೆ. ಜೈಲಿಗೆ ಹಾಕ್ತಾರೆ. ಆದಾದಮೇಲೆ ಅವರಿಗೆ ಬಿಡುಗಡೆ ಭಾಗ್ಯ ಸಿಗುತ್ತೆ. ಜೈಲಿಂದ ಬಂದಮೇಲೆ ಕೆಲವರು ಮಾತ್ರ ಬದಲಾಗ್ತಾರೆ ಇನ್ನು ಕೆಲವರು ಹಳೇ ಚಾಳಿನೇ ಮುಂದುವರೆಸುತ್ತಾರೆ.
ಆದರೆ, ಉತ್ತರ ಪ್ರದೇಶದಲ್ಲಿ ಅತ್ಯಾಚಾರ ನಡೆಸಿದ ಆರೋಪಿಯನ್ನು ಎತ್ತಿನ ಗಾಡಿಗೆ ಕಟ್ಟಿ, ಸ್ಥಳೀಯರು ಆತನ ಮೇಲೆ ಹಲ್ಲೆ ಮಾಡಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವಿಡಿಯೋದಲ್ಲಿ 22 ವರ್ಷದ ಯುವಕನ ದೇಹವನ್ನು ಬೆತ್ತಲೆಯಾಗಿಸಿ, ಎತ್ತಿನ ಗಾಡಿಗೆ ಕಟ್ಟಿ ಹಾಕಲಾಗಿದೆ. ಕೆಲವರು ನಾಯಿಯನ್ನು ಅವನ ಮೇಲೆ ದಾಳಿ ಮಾಡಲು ಪ್ರಚೋದಿಸುತ್ತಿರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು.
ವೀಡಿಯೊ ವೈರಲ್ ಆದ ನಂತರ ಆತನ ಕುಟುಂಬವು ಸ್ಥಳೀಯ ಪೊಲೀಸರಿಗೆ ದೂರು ನೀಡಿದೆ. “ಮಹಿಳೆಯೊಬ್ಬರ ಲಿಖಿತ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಹಲ್ಲೆ ಮತ್ತು ಹಾನಿಗಾಗಿ ಎಫ್ಐಆರ್ ದಾಖಲಿಸಲಾಗಿದೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಪಾಂಡೆ ತಿಳಿಸಿದ್ದಾರೆ.