ಉಡುಪಿ : ಎಲ್ಲೆಡೆ ಇಂದು ನಾಗರ ಪಂಚಮಿಯ ಶುಭಾಶಯಗಳು. ವಿಶೇಷವಾಗಿ ಕರಾವಳಿಯಲ್ಲಿ ಇಂದು ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆಮಾಡಿದೆ. ಕರಾವಳಿಯ ಉದ್ದಕ್ಕೂ ಇರುವ ಪವಿತ್ರ ನಾಗ ಕ್ಷೇತ್ರಗಳಲ್ಲಿ, ನಾಗಬನಗಳಲ್ಲಿ ನಾಗರ ಪಂಚಮಿಯ ವಿಶೇಷ ತನು ಸೇವೆ ಅರ್ಪಿಸಿ ಭಕ್ತರು ಪಾವನಗೊಂಡರು.
ಮೂಲ ನಾಗನಿಗೆ ನಾಗಬನಗಳಲ್ಲಿ ತನು ತಂಬಿಲ ಅರ್ಪಿಸಿದರು. ಸಿಯಾಳ, ಹಿಂಗಾರ, ಹಾಲು, ಅರಶಿನ ಸಮರ್ಪಿಸಿದರು. ಎಲ್ಲೆಡೆ ನಾಗಬನಗಳಲ್ಲಿ ಹಾಲು ಸೀಯಾಳ ಅಭಿಷೇಕ ಸಹಿತ ಸಾಂಪ್ರದಾಯಿಕ ಆಚರಣೆಗಳು ನಡೆದವು.
ಕಾಪು, ಉಡುಪಿ, ಕುಂದಾಪುರ ಭಾಗದಲ್ಲಿ ಸುಬ್ರಹ್ಮಣ್ಯ ದೇವಾಸ್ಥನ, ನಾಗಬನ, ಮೂಲ ನಾಗಬನಕ್ಕೆ ಭಕ್ತರ ದಂಡು ಹರಿದು ಬಂದ ದೃಶ್ಯ ಎಲ್ಲಡೆ ಕಂಡು ಬಂತು.



















