ಗುಡ್ಡಮ್ಮಾಡಿ/ಕುಂದಾಪುರ : ಪ್ರತೀ ವರ್ಷ ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸುವ ಈ ಹಬ್ಬವನ್ನು ನಾಡಿನಾಡ್ಯಂತ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಅದರಲ್ಲೂ ಕರಾವಳಿಯಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವ ಇದೆ. ಕರಾವಳಿಯ ಪುಣ್ಯ ನಾಗಸನ್ನಿಧಿ ಶ್ರೀ ಕ್ಷೇತ್ರ ಗುಡ್ಡಮ್ಮಾಡಿಯಲ್ಲೂ ಸಂಭ್ರಮದ ನಾಗರ ಪಂಚಮಿ ನಡೆಯಿತು. ಶ್ರೀ ನಾಗ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಸಿಯಾಳ ಸೇವೆ, ಹಾಲು ಸೇವೆ, ಸಿಂಗಾರ ಸೇವೆ, ಅರಶಿಣ ಸೇವೆ ಹೀಗೆ ಹಲವು ಸೇವೆಗಳು ದೇಗುಲದಲ್ಲಿ ನೆರವೇರಿತು.
ಮುಂಜಾನೆಯಿಂದ ಭಕ್ತರು ಸಾಗರೋಪಾದಿಯಲ್ಲಿ ಬರುತ್ತಿದ್ದು, ಶ್ರೀ ದೇವರ ದರ್ಶನ ಪಡೆದು ಅಭಿಷೇಕ, ಪೂಜೆಯನ್ನು ಸಲ್ಲಿಸಿದರು. ಬಂದಂತಹ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.



















