ಕುಕ್ಕೆ/ದಕ್ಷಿಣ ಕನ್ನಡ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸುಬ್ರಹ್ಮಣ್ಯ ದೇವರು ನಾಗರೂಪದಲ್ಲಿ ನೆಲೆಸಿರುವುದರಿಂದ ಈ ಸ್ಥಳವು ನಾಗಾರಾಧನೆಗೆ ಪ್ರಸಿದ್ಧವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಭಾರತದ ಪ್ರಮುಖ ನಾಗಕ್ಷೇತ್ರವಾಗಿದೆ. ಇಲ್ಲಿ ನಾಗರ ಪಂಚಮಿಯಂದು ಸಾವಿರಾರು ಭಕ್ತರು ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ವಾಸುಕಿ ಸುಬ್ರಹ್ಮಣ್ಯ ನಾಗದೇವರಿಗೆ ವಿಶೇಷ ಪೂಜೆಗಳನ್ನು ಮಾಡಿ, ಹಾಲನ್ನು ಅರ್ಪಿಸಲಾಯಿತು.
ವಿಶೇಷ ಉತ್ಸವಗಳು ಢಕ್ಕೆ ಬಲಿ ಸೇವೆ, ನಾಗ ಸಂಸ್ಕಾರದಂತಹ ಧಾರ್ಮಿಕ ಆಚರಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ನಾಗರ ಪಂಚಮಿಯ ಆಚರಣೆಯು ದೇವಸ್ಥಾನದ ಸಂಪ್ರದಾಯದಂತೆ ನಡೆಯುತ್ತದೆ ಮತ್ತು ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ದೇವಲದ ನಾಗಪ್ರತಿಷ್ಠೆ ಮಂಟಪದ ನಾಗನಕಲ್ಲಿಗೆ ಭಕ್ತರು ತನು ಹಾಗೂ ಎಳನೀರು ಸಮರ್ಪಣೆ ಮಾಡಿದರು.
ಊರು ಹಾಗೂ ಪರವೂರಿಗಳಿಂದ ಭಕ್ತರು ಧಾವಿಸಿದ್ದರು. ಬೆಳಗ್ಗೆ 7ಗಂಟೆಯಿಂದ ಭಕ್ತರಿಗೆ ಹಾಲು ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಬೆಳಗಿನಿಂದಲೇ ಭಕ್ತರ ಸುದೀರ್ಘ ಸರದಿ ಕಂಡು ಬಂತು.