ಉಡುಪಿ: ಮಳೆಗಾಲ(Rainy Season)ದ ಸಂದರ್ಭದಲ್ಲಿ ಹಾವು (Snake), ವಿಷ ಜಂತುಗಳು ಪ್ರತ್ಯಕ್ಷವಾಗುವುದು ಸರ್ವೇ ಸಾಮಾನ್ಯ. ಬೆಚ್ಚನೆಯ ಸ್ಥಳಗಳಲ್ಲಿ ಹಾವುಗಳು ಪತ್ತೆಯಾಗುತ್ತಿರುವ ಹಲವಾರು ಪ್ರಕರಣಗಳನ್ನು ನಾವು ನೋಡಿರುತ್ತೇವೆ. ಈಗ ಇಂತಹುದೇ ಘಟನೆಯೊಂದು ನಡೆದಿದೆ.
ಫ್ರಿಡ್ಜ್‌ನೊಳಗೆ ಇಟ್ಟಿದ್ದ ಹೂಕೋಸಿನೊಳಗೆ (Cauliflower) ಹಾವಿನ ಮರಿಯೊಂದು ಕಂಡು ಬಂದಿದ್ದು, ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕು ಪಡುಬಿದ್ರೆಯ ಬೇಂಗ್ರೆ ಎಂಬಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಮನೆಯಲ್ಲಿನ ಫ್ರಿಡ್ಜ್ ನಲ್ಲಿ ತರಕಾರಿ ಇಟ್ಟಿದ್ದರು. ಅಡುಗೆ ಮಾಡುವುದಕ್ಕಾಗಿ ಫ್ರಿಡ್ಜ್ ನಲ್ಲಿಟ್ಟಿದ್ದ ತರಕಾರಿ ತೆಗೆದು ಕತ್ತರಿಸಲು ಮುಂದಾಗುತ್ತಿದ್ದಂತೆ ಹೂಕೋಸಿನ ಒಳಗಿನಿಂದ ಹಾವಿನ ಮರಿ ಹೊರಗೆ ಬರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಅದು ಕಾಣುತ್ತಿದ್ದಂತೆ ಕೈಯಲ್ಲಿದ್ದ ತರಕಾರಿ ಬಿಟ್ಟು ಓಡಿ ಹೋಗಿದ್ದಾರೆ. ಆನಂತರ ಉರಗ ತಜ್ಞರು ಬಂದು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
