ಬೆಂಗಳೂರು : ಕೇವಲ Vote Bank ರಾಜಕಾರಣಕ್ಕಾಗಿ ಬೇರೆ ರಾಜ್ಯಗಳ ಅಕ್ರಮ ಭೂ ಒತ್ತುವರಿದಾರರಿಗೆ ಮಿಡಿಯುವ ಸಿದ್ದರಾಮಯ್ಯನವರ ಮನಸ್ಸು ಬೆಂಗಳೂರಿನ ಮೂಲ ನಿವಾಸಿಗಳ ಬಗ್ಗೆ ಮಿಡಿಯುವುದಿಲ್ಲವೇಕೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷರಾದ ಎನ್.ಆರ್ ರಮೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.
ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ಸಣ್ಣ ಸಣ್ಣ ನಿವೇಶನಗಳನ್ನು ರಚನೆ ಮಾಡಿ ಅಕ್ರಮ ಬಡಾವಣೆಯನ್ನು ನಿರ್ಮಿಸಿದ್ದ ವಾಸೀಮ್ ಎಂಬ ಪರಮ ವಂಚಕ ತಲಾ 50 ಸಾವಿರ ರೂಪಾಯಿಗಳಷ್ಟು ಹಣವನ್ನು ಪಡೆದು ಸರ್ಕಾರಿ ಸ್ವತ್ತಿನಲ್ಲಿ ಶೆಡ್/ಮನೆಗಳನ್ನು ನಿರ್ಮಿಸಿಕೊಳ್ಳಲು ಅನುವು ಮಾಡಿ ಕೊಟ್ಟಿರುವ ಸಂಗತಿ ಸರ್ಕಾರದ ಗಮನಕ್ಕೆ ಬಂದಿತ್ತೇ, ಇಲ್ಲವೇ ? ಎಂದು ಮುಖ್ಯಮಂತ್ರಿಯನ್ನು ಎನ್.ಆರ್ ರಮೇಶ್ ಪ್ರಶ್ನಿಸಿದ್ದಾರೆ.

ವಾಸೀಮ್ ಎಂಬಾತ ರಾಜ್ಯದ ಕಂದಾಯ ಸಚಿವ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ ಸಚಿವ ಕೃಷ್ಣ ಬೈರೇಗೌಡರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯಾಗಿದ್ದರಿಂದ ಆತನ ವಿರುದ್ಧ ಕ್ರಮ ಕೈಗೊಳ್ಳಲು ಈವರೆಗೂ ಸಿದ್ದರಾಮಯ್ಯನವರ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಎನ್.ಆರ್ ರಮೇಶ್ ಗಂಭೀರ ಆರೋಪಿಸಿದ್ದಾರೆ.
ಇದನ್ನೂ ಓದಿ : ಕರುವಿಗೂ ತೊಟ್ಟಿಲು ಶಾಸ್ತ್ರ.. ‘ಸರಯೂ’ ಎಂದು ಹೆಸರಿಟ್ಟ ಕುಟುಂಬಸ್ಥರು!



















