ಬೆಂಗಳೂರು: ಮೈಸೂರಿನ ಪ್ರಸಿದ್ಧ ಮೈಲಾರಿ ದೋಸೆ ಹೋಟೆಲ್ ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ. ಬೆಂಗಳೂರಿನ ಇಂದಿರಾನಗರದಲ್ಲಿ ನೂತನವಾಗಿ ಆರಂಭಗೊಂಡಿರುವ ವಿನಾಯಕ ಮೈಲಾರಿ ಹೋಟೆಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀಪ ಬೆಳಗಿಸಿ, ರಿಬ್ಬನ್ ಕಟ್ ಮಾಡುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ. ದೇವೇಗೌಡ, ಸಿಎಂ ಸಿದ್ದರಾಮಯ್ಯರೊಂದಿಗೆ ಭಾಗವಹಿಸಿದರು. ಹೋಟೆಲ್ ಉದ್ಘಾಟನೆಯ ಬಳಿಕ ಸಿದ್ದರಾಮಯ್ಯ ಮೈಲಾರಿ ಹೋಟೆಲ್‌ನ ಪ್ರಸಿದ್ಧ ದೋಸೆಯನ್ನು ಸವಿದು, ಅದರ ರುಚಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನಲ್ಲೇ ತನ್ನ ವಿಶಿಷ್ಟ ರುಚಿ ಮತ್ತು ಪರಂಪರೆಯ ದೋಸೆಯಿಂದ ಜನಪ್ರಿಯವಾಗಿರುವ ಮೈಲಾರಿ ಹೋಟೆಲ್, ಇದೀಗ ಬೆಂಗಳೂರಿನ ಆಹಾರ ಪ್ರಿಯರಿಗೆ ಸಹ ಅದೇ ಸವಿಯನ್ನು ನೀಡಲು ಸಜ್ಜಾಗಿದೆ. ಇಂದಿರಾನಗರದಲ್ಲಿ ಆರಂಭಗೊಂಡಿರುವ ಈ ಹೋಟೆಲ್‌ಗೆ ಆರಂಭದ ದಿನವೇ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೈಸೂರಿನ ಪ್ರಸಿದ್ಧ ಮೈಲಾರಿ ದೋಸೆಯನ್ನು ಬೆಂಗಳೂರಿನಲ್ಲೇ ಸವಿಯುವ ಅವಕಾಶ ದೊರೆತಿರುವುದಕ್ಕೆ ಆಹಾರ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್



















