ಮೈಸೂರು | ಜಾತ್ರೆಯಲ್ಲಿ ಬಂಡಿ ಓಡಿಸುವಾಗ ಬಿದ್ದು ಯುವಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಲಕಾಡು ಗ್ರಾಮದಲ್ಲಿ ನಡೆದಿದೆ.
ಪ್ರವೀಣ್ (22) ಮೃತ ಯುವಕ.
ತಲಕಾಡು ಗ್ರಾಮದ ಗ್ರಾಮ ದೇವತೆ ಬಂಡರಸಮ್ಮ ಹಬ್ಬದ ಬಂಡಿ ಉತ್ಸವ ಈ ದುರ್ಘಟನೆ ನಡೆದಿದೆ. ನಿನ್ನೆ ಜಾತ್ರೆಯ ವೇಳೆ ಬಂಡಿ ಓಡಿಸುವಾಗ ಬಂಡಿಯಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದ ಯುವಕ ಪ್ರವೀಣ್‌ಗೆ ಗಂಭೀರ ಗಾಯವಾಗಿತ್ತು.
ಕೂಡಲೇ ಆತನ್ನು ಚಿಕಿತ್ಸೆಗಾಗಿ ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಪ್ರವೀಣ್ ಸಾವನ್ನಪ್ಪಿದ್ದಾನೆ. ಕುಟುಂಬಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ : ಮತ್ತಷ್ಟು ಕಳಪೆ ಮಟ್ಟಕ್ಕಿಳಿದ ಮಂಗಳೂರಿನ ಏರ್ ಕ್ವಾಲಿಟಿ | ಜನರಲ್ಲಿ ಆತಂಕ!


















