ಮೈಸೂರು : ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ನಗರದ ವಸ್ತು ಪ್ರದರ್ಶನ ಆವರಣದ ಮುಂದಿನ ರಸ್ತೆಯಲ್ಲಿ ಇಂದು ಬೆಳಗ್ಗೆ ಸುಮಾರು 11.20 ಗಂಟೆ ಹೊತ್ತಿಗೆ ನಡೆದಿದೆ. ವೆಂಕಟೇಶ್ ಆಲಿಯಾಸ್ ಗಿಲಿಗಿಲಿ ನಾರಾಯಣ (45) ಕೊಲೆಯಾದ ವ್ಯಕ್ತಿ.
ಕಾರಿನ ಗ್ಲಾಸ್ ಓಪನ್ ಮಾಡಿಕೊಂಡು ವೆಂಕಟೇಶ್ ತೆರಳುವಾಗ ಆಟೋ ಮತ್ತು ಬೈಕ್ನಲ್ಲಿ ಬಂದ ಕಿಡಿಗೇಡಿಗಳು, ಕಾರದ ಪುಡಿ ಎರಚಿ ದಾಳಿ ಮಾಡಿದ್ದಾರೆ. ಕೃತ್ಯ ಎಸಗುವಾಗ ನಾಲ್ಕು ಮಂದಿ ಇದ್ದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ನಜರ್ಬಾದ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮೃತ ವ್ಯಕ್ತಿಯ ಶವವನ್ನು ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ನಜರ್ ಬಾದ್ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿ, ಮೃತದೇಹವನ್ನು ಶವಗಾರಕ್ಕೆ ಸಾಗಣೆ ಮಾಡಿದ್ದಾರೆ.