ನಮ್ಮ ಕರ್ನಾಟಕದ ಹೆಮ್ಮೆಯ ಬ್ರಾಂಡ್ ಮೈಸೂರ್ ಸ್ಯಾಂಡಲ್ ಸೋಪ್ಸ್ ಗೆ ಇನ್ಮುಂದೆ ಮಿಲ್ಕಿ ಕಳೆ ಬರ್ತಿದೆ. ಯಾಕೆಂದ್ರೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ರಾಜ್ಯದ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್ಸ್ ಉತ್ಪನ್ನಗಳಿಗೆ ರಾಯಭಾರಿಯನ್ನಾಗಿ ನೇಮಕಕೊಂಡಿದ್ದಾರೆ.

ಈ ವಿಚಾರವನ್ನ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ಅಧಿಕೃತವಾಗಿ ಘೋಷಣೆ ಮಾಡಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ತಮನ್ನಾ ಮೈಸೂರು ಸ್ಯಾಂಡಲ್ ಸೋಪ್ಸ್ ನ ರಾಯಭಾರತ್ವ ವಹಿಸಲಿದ್ದಾರೆ. ಇನ್ನು ಈ ಎರಡು ವರ್ಷದ ಒಪ್ಪಂದಕ್ಕೆ ತಮನ್ನಾಗೆ ರಾಜ್ಯ ಸರ್ಕಾರ ಬರೋಬ್ಬರಿ 6.20 ಕೋಟಿ ಪಾವತಿಸಿದೆ. ಶೀಘ್ರವೇ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತುಗಳಲ್ಲಿ ತಮನ್ನಾ ತಮ್ಮ ಮಿಂಚು ಹರಿಸಲಿದ್ದಾರೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರಿ ಸ್ವಾಮ್ಯದ ಲಿಡ್ಕರ್ ಗೆ ಕನ್ನಡದ ನಟ ಡಾಲಿ ಧನಂಜಯ್ ರನ್ನು ನೇಮಕ ಮಾಡಲಾಗಿತ್ತು.