ಮೈಸೂರು: ಮೈಸೂರು ಅರಮನೆ ಪ್ರವೇಶ ದರವನ್ನು ಸರ್ಕಾರ ಹೆಚ್ಚಳ ಮಾಡಿದೆ. ಟಿಕೆಟ್ ದರದ ಮೇಲೆ ಜಿಎಸ್ಟಿ ಸೇರಿಸಿ ಹೆಚ್ಚಿಸಲಾಗಿದೆ.
ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಬರೋಬ್ಬರಿ 900 ರೂ. ಗೆ ಹೆಚ್ಚಾಗಿದೆ. ಭಾರತೀಯ ವಯಸ್ಕರರ ಟಿಕೆಟ್ ದರ 120 ರೂ.ಗೆ ಏರಿಕೆಯಾಗಿದೆ.
ಒಳ ಆವರಣದಲ್ಲಿ ಚಪ್ಪಲಿ ಸ್ಟ್ಯಾಂಡ್, ಲಗ್ಗೇಜ್ ಕೊಠಡಿ ಹಾಗೂ ಶೌಚಾಲಯ ಸೇವಾ ಶುಲ್ಕ ರದ್ದು ಮಾಡಲಾಗಿದೆ. ಹಿಂದೆ ವಿದೇಶಿಯರಿಗೆ 100 ರೂ. ಪ್ರವೇಶ ಶುಲ್ಕವಿತ್ತು. ಈಗ ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ 900 ರೂ. ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ವಿದೇಶಿ ಪ್ರವಾಸಿಗರಿಗೆ ಪ್ರವೇಶ ದರ ಒಟ್ಟು 1,000 ರೂ. ಆಗಿದೆ. ಭಾರತೀಯ ವಯಸ್ಕರಿಗೆ ಪ್ರವೇಶ ಶುಲ್ಕ 120 ರೂ. ನಿಗದಿಪಡಿಸಲಾಗಿದೆ.
10ರಿಂದ 18 ವರ್ಷದೊಳಗಿನ ಮಕ್ಕಳಿಗೆ 70 ರೂ. ದರ ನಿಗದಿ ಪಡಿಸಲಾಗಿದೆ. ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ತಲಾ 50 ರೂ. ನಿಗದಿಪಡಿಸಲಾಗಿದೆ. ಈ ಕುರಿತು ಅರಮನೆ ಮಂಡಳಿ ತೀರ್ಮಾನ ಕೈಗೊಂಡಿದೆ.