ಮೈಸೂರು : ದನ ಮೇಯಿಸಲು ಹೋಗಿದ್ದ ವೇಳೆ ರೈತನನ್ನು ಬಲಿ ಪಡೆದಿದ್ದ ಹುಲಿಯನ್ನು ಈಗ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.
ದನ ಮೇಯಿಸಲು ಹೋಗಿದ್ದ ವೇಳೆ ರೈತ ಹುಲಿ ದಾಳಿಗೆ ಬಲಿಯಾದ ಘಟನೆ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ನಡೆದಿತ್ತು. ರಾಜಶೇಖರ (58) ಮೃತ ರೈತ. ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಂತೆಯೇ ಇದೀಗ ಸಾಕಾನೆಗಳ ಸಹಾಯದಿಂದ ಹುಲಿಯನ್ನು ಸೆರೆಹಿಡಿಯಲಾಗಿದೆ. ಸರಗೂರು ತಾಲೂಕಿನ ಮುಳ್ಳೂರು ಬಳಿ ಹುಲಿ ಸೆರೆಯಾಗಿದೆ. ಸೆರೆಹಿಡಿದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ.
ಇದನ್ನೂ ಓದಿ : ಬಜರಂಗದಳ ನಾಯಕನ ಹತ್ಯೆ : ಆರೋಪಿಯೊಬ್ಬನ ತಂದೆ ಆತ್ಮಹತ್ಯೆ



















