ಮೈಸೂರು : ಒಂದು ಕೋಟಿ ರೂ. ಹಣಕ್ಕಾಗಿ ರಿಯಲ್ ಎಸ್ಟೇಟ್ ಹಾಗೂ ಲೇವಾದೇವಿ ಉದ್ಯಮಿ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ ಅಪಹರಿಸಿದ್ದ ಐವರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಮೈಸೂರಿನ ವಿಜಯ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃತ್ಯ ನಡೆದ ಏಳು ಗಂಟೆಯ ಅವಧಿಯಲ್ಲಿಯೇ ಉದ್ಯಮಿಯನ್ನು ಅಪಹರಿಸಿದ್ದ ಐವರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದು, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಅಪಹರಣ ಕೃತ್ಯಕ್ಕೆ ಪರಿಚಿತನೇ ಮಾಸ್ಟರ್ ಮೈಂಡ್ ಎಂಬುದು ತಿಳಿದು ಬಂದಿದೆ. ಮೂಲತಃ ಬೆಳವಾಡಿ ಗ್ರಾಮದವರಾದ ಹಾಲಿ ವಿಜಯ ನಗರ ನಾಲ್ಕನೇ ಹಂತದ ನಿವಾಸಿಯಾಗಿರುವ ಉದ್ಯಮಿ ಲೋಕೇಶ್ ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಅದೇ ಬೆಳವಾಡಿ ಗ್ರಾಮದ ಅಪಹರಣಕಾರರಾದ ಹೆಚ್.ಎಂ. ಸಂತೋಷ್, ಹೆಚ್.ಎಸ್. ಅಭಿಷೇಕ್, ಆರ್. ಪ್ರಜ್ವಲ್, ಬಿ.ಎನ್. ದರ್ಶನ್, ಪ್ರೀತಮ್ ಬಂಧಿತರಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ : ನಮ್ಮ ರಕ್ತದಲ್ಲಿ ಕನ್ನಡವಿದೆ, ಯಾವುದೇ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ | ಮಧು ಬಂಗಾರಪ್ಪ ಸ್ಪಷ್ಟನೆ



















