ಮೈಸೂರು : ಮಹಿಳೆಯೊಬ್ಬಳು ಮಾಲೀಕನ ಮೇಲೆ ದರ್ಪ ತೋರಿ ಕಾಲಿನಿಂದ ಒದ್ದಿರುವ ಘಟನೆ ಬೈಲಕುಪ್ಪೆ ಟಿಬೆಟಿಯನ್ ಕ್ಯಾಂಪ್‌ನಲ್ಲಿ ನಡೆದಿದೆ.
ಕೂಲಿ ಕೆಲಸಕ್ಕೆ ಅಸ್ಸಾಂ ರಾಜ್ಯದಿಂದ ಬಂದಿದ್ದಳು. ಮಾಲೀಕನ ಮೇಲೆ ದರ್ಪ ತೋರಿದ್ದಾಳೆ. ಈ ವೇಳೆ ವಿಡಿಯೋ ರೆಕಾರ್ಡ್ ಮಾಡ್ತಿದ್ದ ಸ್ಥಳೀಯನ ಮೇಲೂ ಹಲ್ಲೆಗೈದಿದ್ದಾಳೆ. ಇದೀಗ ಜಗಳದಲ್ಲಿ ತೊಡಗಿದ್ದ 10 ಮಂದಿ ವಿರುದ್ಧ ಸುಮೊಟೋ ಕೇಸ್ ದಾಖಲಾಗಿದೆ.
ಅಸ್ಸಾಂ ಜನರನ್ನ ಪರಿಶೀಲಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕುಶಾಲನಗರ ವತಿಯಿಂದ ಬೈಲಕುಪ್ಪೆ ಪೊಲೀಸ್ ಸ್ಟೇಷನ್ ಗೆ ಮನವಿ ಮಾಡಿದ್ದಾರೆ. ಅಂತೆಯೇ ಬೈಲಕುಪ್ಪೆ ಪೊಲೀಸ್ ಪಿ ಎಸ್ ಐ ರವಿಕುಮಾರ್ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಉತ್ತರ ವಿವಿಯಲ್ಲಿ 5 ಹುದ್ದೆಗಳ ನೇಮಕಾತಿ : 41 ಸಾವಿರ ರೂಪಾಯಿ ಸ್ಯಾಲರಿ



















