ನನ್ನ ದೇಹ ಚರ್ಚೆಯ ವಿಷಯವಲ್ಲ ಎಂದು ತನನ್ನು ನೆಗೆಟಿವ್ ಟ್ರೋಲ್ ಮಾಡುವವರಿಗೆ ಸಾನ್ವಿ ಸುದೀಪ್ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕುವ ಮೂಲಕ ಕೌಂಟರ್ ಕೊಟ್ಟಿದ್ದಾರೆ.

ಶನಿವಾರ ನಡೆದ ಮಾರ್ಕ್ ಕೃತಜ್ಞತಾ ಸುದ್ದಿಗೋಷ್ಠಿಯಲ್ಲಿ ಸುದೀಪ್‌ಗೆ ಮಗಳ ಬಗ್ಗೆ ನೆಗೆಟಿವ್ ಟ್ರೋಲ್ ಕುರಿತು ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ತನ್ನ ಮಗಳ ವಿರುದ್ಧ ಮಾತಾಡುವವರಿಗೆ ಕಿಚ್ಚ ಸುದೀಪ್ ಖಡಕ್ ಕೌಂಟರ್ ಕೊಟ್ಟಿದ್ದರು. ನಮಗೆ ಪ್ರೋತ್ಸಾಹ ಕೊಡುವವರ ಬಗ್ಗೆ ಮಾತಾಡೋಣ, ನನ್ನ ಬಗ್ಗೆ, ನನ್ನ ಮಗಳ ಬಗ್ಗೆ ನೆಗೆಟಿವ್ ಮಾತಾಡುವ ಯಾವನೋ ಬಗ್ಗೆ ನಾನು ಯಾಕೆ ಮಾತಾಡಲಿ ಎಂದಿದ್ದರು.
ನನ್ನ ಮಗಳು ಸರ್, ಅವಳು ಏನು ಅಂತಾ ನನಗೆ ಗೊತ್ತು. ನನ್ನ ಮಗಳು ನನಗಿಂತ ತುಂಬಾ ಎತ್ತರಕ್ಕೆ ಬೆಳಿತಾಳೆ ಎಂದು ಕಿಚ್ಚ ತಮ್ಮ ಮಗಳ ಬಗ್ಗೆ ಹೆಮ್ಮೆ ಪಟ್ಟಿದ್ದರು. ಇದೀಗ ಸುದೀಪ್ ಪುತ್ರಿ ಸಾನ್ವಿ ಇನ್ಸ್ಟಾದಲ್ಲಿ ಸ್ಟೋರಿ ಹಾಕುವ ಮೂಲಕ ಖಡಕ್ ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಕಿರಿಯರ ಕ್ರಿಕೆಟ್ ವಿಶ್ವಕಪ್‌ಗೆ ಭಾರತ ತಂಡ ಘೋಷಣೆ : ಆಯುಷ್ ಮ್ಹಾತ್ರೆಗೆ ನಾಯಕತ್ವದ ಪಟ್ಟ ಸೂರ್ಯವಂಶಿಗೆ ದೊಡ್ಡ ಜವಾಬ್ದಾರಿ



















