ಬೆಂಗಳೂರು: ಇತ್ತೀಚೆಗೆ ಮುಜರಾಯಿ ದೇವಸ್ಥಾನಗಳಲ್ಲಿ ಮದುವೆಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ಮುಜರಾಯಿ ದೇವಸ್ಥಾನಗಳಲ್ಲಿ ಷರತ್ತು ಬದ್ಧ ಮದುವೆಗೆ ಅವಕಾಶ ನೀಡಬೇಕು ಎಂದು ದೇವಾಲಯಗಳ ಅರ್ಚರಕರ ಒಕ್ಕೂಟದಿಂದ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಗೆ ಮನವಿ ಮಾಡಿದ್ದಾರೆ.

ಈ ಹಿಂದೆ ಮುಜರಾಯಿ ಇಲಾಖೆಯಡಿಯಲ್ಲಿರುವ 40,000 ದೇವಸ್ಥಾನಗಳಲ್ಲಿ ಮದುವೆ ಮಾಡಲು ನಿರಾಕರಿಸಲಾಗಿತ್ತು.ಆದ್ದರಿಂದ ಖಾಸಗಿ ದೇವಸ್ಥಾನಗಳಲ್ಲಿ ಮದುವೆ ನಡೆಯುತ್ತಿದ್ದವು, ಆದರೆ ಇತ್ತೀಚೆಗೆ ಮುಜರಾಯಿ ದೇವಸ್ಥಾನಗಳಲ್ಲಿ ಮದುವೆಗೆ ಬೇಡಿಕೆ ಹೆಚ್ಚಾಗಿದೆ ಹಾಗೂ ಇದರಿಂದ ಸರ್ಕಾರಕ್ಕೆ ಕೂಡ ಆದಾಯ ಬರುತ್ತದೆ. ಹಾಗಾಗಿ, ಸರ್ಕಾರವೇ ಕೆಲ ಷರತ್ತುಗಳನ್ನ ಹಾಕಿ ಮತ್ತೆ ಮದುವೆಗೆ ಅವಕಾಶ ಮಾಡಿಕೊಡುಂತೆ ಪತ್ರದ ಮೂಲಕ ಮಾನವಿ ಮಾಡಿದ್ದಾರೆ.
ಮುಜರಾಯಿ ದೇವಸ್ಥಾನಗಳಲ್ಲಿ ಮದುವೆಯಾದ ನಂತರ, ದಂಪತಿ ವಿಚ್ಚೇದನ, ಕಲಹವಾದರೆ ಆ ಪ್ರಕರಣದಲ್ಲಿ ಅರ್ಚಕರನ್ನು ಭಾಗಿ ಮಾಡಬಾರದು, ಯಾವುದೇ ಕಾರಣಕ್ಕೂ ವಿಚಾರಣೆ, ಕೋರ್ಟ್‌ಗೆ ಕರೀಯಬಾರದು ಈ ರೀತಿಯ ಷರತ್ತುಗಳನ್ನು ಹಾಕಿ ಅನುಮತಿ ಕೊಡುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ ‘ಡೆವಿಲ್’ ದರ್ಶನ | 500ಕ್ಕೂ ಹೆಚ್ಚು ಪರದೆಗಳಲ್ಲಿ ದಾಸನ ಅಬ್ಬರ!


















