ಕೊಪ್ಪಳ: ಬಾಬ್ರಿ ಮಸೀದಿ (Babri Masjid) ಒಡೆದು ರಾಮ ಮಂದಿರ (Rama Mandir) ನಿರ್ಮಾಣ ಮಾಡಿದಾಗ ಯಾವೊಬ್ಬ ಮುಸಲ್ಮಾನ (Muslim) ವ್ಯಕ್ತಿ ವಿರೋಧಿಸಲಿಲ್ಲ. ಆದರೆ, ನಾವು ದೇವಸ್ಥಾನ (Temple) ಒಡೆದು ಬೇರೆ ಏನನ್ನಾದರೂ ನಿರ್ಮಿಸಲು ಮುಂದಾದರೆ ಬಿಟ್ಟು ಬಿಡುತ್ತೇವಾ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮಾಜ ಬಾಂಧವರಿಗೆ ಜಮೀನು ಇಲ್ಲ. ಅವರಲ್ಲಿ ಬಹುತೇಕರು ಕೃಷಿ ಕಾರ್ಮಿಕರಿದ್ದಾರೆ. ಅವರಲ್ಲೂ ಬಡವರಿದ್ದಾರೆ. ಹೀಗಾಗಿ ಭೇದಭಾವ ಮಾಡುವುದು ಸರಿಯಲ್ಲ. ಅವರು ಕೂಡ ನಮ್ಮ ದೇಶದವರೇ. ಹಿಂದೂಗಳಿಗೆ ಹೋಲಿಸಿದರೆ, ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಮುಸ್ಲಿಂ ಹುಡುಗಿಯರು ತೀರಾ ಕಡಿಮೆ ಓದುತ್ತಿದ್ದಾರೆ. ಮುಸ್ಲಿಂ ಹುಡುಗಿಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಎಲ್ಲರೂ ಒಂದಾಗಿ ಸಮಾಜದಲ್ಲಿ ಸಹಿಷ್ಣುಗಳಂತೆ ಬದುಕು ಸಾಗಿಸಬೇಕು ಎಂದು ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ಮಾಡುವಾಗ ಒಬ್ಬನೇ ಒಬ್ಬ ಮುಸ್ಲಿಂ ವಿರೋಧ ಮಾಡಿಲ್ಲ. ಆದರೆ, ಬಿಜೆಪಿ ರಾಜಕೀಯ ದುರುಪಯೋಗ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.