ಕೊಪ್ಪಳ: ಕೋಮು ಗಲಭೆಯ ನಗರದಲ್ಲಿ ಮುಸ್ಲಿಂ ಸಾಹಿತಿ ಸಾಮರಸ್ಯದ ಸಂದೇಶ ನೀಡಿದ್ದಾರೆ. ರಂಜಾನ್ ಹಬ್ಬದಂದೆ ಸಾಮರಸ್ಯ ಸಾಹಿತ್ಯ ಬರೆದ ಮುಸ್ಲಿಂ ಸಮುದಾಯ ಗಾಯಕ ನಮಗೆ ರಾಮನೂ ಬೇಕು, ರಹಿಮನೂ ಬೇಕು , ಏಸು ಬೇಕು ಎಂದು ಸಾಮರಸ್ಯದ ಸಂದೇಶವನ್ನುಸಾರಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಮುಸ್ಲಿಂ ಸಮುದಾಯದ ಮುಖಂಡ, ಗಾಯಕ ಖಾಸೀಂ ಅಲಿ ಮುದ್ದಾಬಳ್ಳಿ, ನನಗೆ ರಾಮನೂ, ರಹಿಮನೂ, ಏಸುನೂ, ಬುದ್ದ, ಬಸವನೂ ಬೇಕು ಎಂದು ಸಾಹಿತ್ಯ ಬರೆದು ಹಾಡಿದ್ದಾರೆ.
ಸಾಮರಸ್ಯದ ಗೀತೆಯನ್ನು ಗವಿಮಠದ ಶ್ರೀಗಳಿಂದ ಬಿಡುಗಡೆ ಮಾಡಿದ ಖಾಸೀಂ ಅಲಿ ಮುದ್ದಾಬಳ್ಳಿ, ಈ ಹಿಂದೆ ತಮ್ಮ ಮನೆಯಲ್ಲಿ ಅಯ್ಯಪ್ಪ ಸ್ವಾಮಿಯ ಪೂಜೆ ಮಾಡಿಸಿ ಸಾಮರಸ್ಯ ಮೂಡಿಸಿದ್ದರು. ಇದೀಗ ರಾಜ್ಯದಲ್ಲಿ ಶಾಂತಿ- ಸಾಮರಸ್ಯ ಮೂಡಿಸಲು ಸಂದೇಶ ಸಾರಿದ್ದಾರೆ.
ಇದನ್ನೂ ಓದಿ : ಕಲಬುರಗಿಯಲ್ಲಿ LPGಗಾಗಿ ಕಣ್ಣೀರು ಹಾಕಿದ ಗೃಹಿಣಿಯರು



















