ಬೆಂಗಳೂರು : ಹಿಂದೂ ದೇವರ ಹೆಸರಲ್ಲಿ ಪೂಜೆ, ಮಾಟಮಂತ್ರಗಳನ್ನು ಮಾಡುತ್ತಾ ಗೋಲ್ಡ್ ಎಗರಿಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಇದೀಗ ಹುಳಿಮಾವು ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯು ಕೋಲಾರ ಮೂಲದ ದಾದಾ ಪೀರ್ ಎಂದು ಗುರುತಿಸಲಾಗಿದ್ದು, ಆತನಿಂದ 53 ಲಕ್ಷ ರೂ. ಮೌಲ್ಯದ 485.4 ಗ್ರಾಂ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವರನ್ನ,ಸ್ಚಾಮೀಜಿಗಳನ್ನ ನಂಬೋರೇ ಇವರ ಟಾರ್ಗೆಟ್ ಆಗಿದ್ದು, ಪೂಜೆ ಮಾಡಿಸೋಕೆ ರೆಡಿ ಇರುವಂತಹವರನ್ನೆ ಹುಡುಕುತ್ತಿದ್ದ ಖದೀಮ. ಪೂಜೆ ಮಾಡಿ ಮನೆ ಸುತ್ತಾ ಮುತ್ತಾ ತಾನೆ ಹೂತಿಟ್ಟು ಮಡಿಕೆ ತೆಗಿತಿದ್ದನು ಇದು ಮಾಟ ಮಂತ್ರದ ಮಡಿಕೆ ಎಂದು ಹೇಳುತ್ತಿದ್ದ ಬಳಿಕ ಒಂದು ಮಡಿಕೆ ಇಟ್ಟು ಅದರೊಳಗೆ ಮನೆಯಲ್ಲಿರೋ ಚಿನ್ನಾಭರಣ ತಂದಿಡಿ ಎನ್ನುತ್ತಿದ್ದ ಮಡಿಕೆ ಒಳಗೆ ನೀರು ಹಾಕಿ ಅರಿಶಿಣ ಹಾಕಿ, ಮನೆಯವರನ್ನು ಹೊರಗೆ ಹೋಗಿ ವಿಶೇಷ ಪೂಜೆ ಮಾಡಬೇಕು ಅನ್ನುತ್ತಿದ್ದನು. ಅದಾದ ಬಳಿಕ ಮಡಿಕೆಯಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಕಲ್ಲು ಹಾಕಿಟ್ಟು, ಬಟ್ಟೆಯಿಂದ ಮುಚ್ಚಿ 48 ದಿನ ತೆಗೆಯಬೇಡಿ ತೆಗೆದರೆ ಮಾಟ ಮಂತ್ರ ಪರಿಹಾರ ಆಗಲ್ಲ ಎಂದು ಹೇಳಿ ಅಷ್ಟರೊಳಗೆ ರಾಜ್ಯ ಬಿಟ್ಟು ಪರಾರಿ ಆಗಿಬಿಡುತ್ತಿದ್ದ ಆರೋಪಿ ಇದೀಗ ಅರೆಸ್ಟ್ ಆಗಿದ್ದಾನೆ.