ಮುಂಬೈ ಬಾಂದ್ರಾದ ಬಾಬಾ ಸಿದ್ಧಿಕಿಯ ಬರ್ಬರ ಹತ್ಯೆಯ ನಂತರದಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆತನ ಮುಂದಿನ ಟಾರ್ಗೆಟ್ ಯಾರು ಎಂಬುದೇ ಈ ಸದ್ಯದ ಚರ್ಚಾ ವಸ್ತುವಾಗಿದೆ. ಮು ಸ್ಟ್ಯಾಂಡಪ್ ಕಾಮಿಡಿಯನ್ ಒಬ್ಬಾತ ಮುಂದಿನ ಟಾರ್ಗೆಟ್ ಎಂಬ ಗಾಳಿ ಸುದ್ದಿ ಹಬ್ಬಿದೆ.
ಕೃಷ್ನಣ ಮೃಗ ಕೊಂದ ಆರೋಪವಿರುವ ನಟ ಸಲ್ಮಾನ್ ಖಾನ್ ಜೊತೆ ವೈಶಮ್ಯ ಸಾಧಿಸಿದ್ದ ಬಿಷ್ಣೋಯಿ ಕೊಲೆ ಬೆದರಿಕೆ ಹಾಕುತ್ತಲೇ ಬಂದಿದ್ದ. ಅದರ ಲೆಕ್ಕಾಚಾರದಲ್ಲೇ ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ಧಿಕಿ ಕೊಲೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಈಗ ಮುಂದಿನ ಟಾರ್ಗೆಟ್ ಮತ್ತೊಬ್ಬ ಹಿಂದೂ ಅವಹೇಳನಕಾರಿ ಭಾಷಣಕಾರ ಮುನಾವರ್ ಫಾರೂಕಿ ಎಂಬ ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.

ಈ ಫಾರೂಕಿ ಸ್ಟ್ಯಾಂಡಪ್ ಕಾಮಿಡಿಯನ್ ಆಗಿದ್ದು, ಹಿಂದೆ ತನ್ನ ಹಾಸ್ಯಕ್ಕಾಗಿ ರಾಮ, ಸೀತೆ ಸೇರಿದಂತೆ ಹಿಂದೂ ದೇವರುಗಳ ಅವಹೇಳನ ಮಾಡಿ ಸುದ್ದಿಯಾಗಿದ್ದ. ಹಲವು ಹಿಂದೂ ಪರರು ಆತನಿಗೆ ತಪರಾಕಿ ಕೊಟ್ಟಿದ್ದರು. ಪೊಲೀಸ್ ಕಂಪ್ಲೆಂಟ್ ಆದರೂ ಫಾರೂಕಿ ತನ್ನ ಕೆಟ್ಠ ಛಾಳಿ ಮುಂದುವರೆಸಿದ್ದು, ಬಿಷ್ಣೋಯಿಯ ತಲೆ ಕೆಡಿಸಿದೆ ಎನ್ನಲಾಗಿದೆ. ಈಗ ಅದೇ ಅಳತೆಯಲ್ಲೇ ನೋಡುವುದಾದರೇ ಫಾರೂಕಿಯೇ ಬಿಷ್ಣೋಯಿಯ ಮುಂದಿನ ಟಾರ್ಗೆಟ್ ಎನ್ನಲಾಗುತ್ತಿದ್ದು, ಮುಂಬೈ ಪೊಲೀಸರು ಈಗಾಗಲೇ ಮುನಾವರ್ ಫಾರೂಕಿಗೆ ಭದ್ರತೆ ಒದಗಿಸಿದ್ದಾರೆ.
ದೇಶ ಒಡೆಯುವವ ವಿರುದ್ಧ ನನ್ನ ಸಮರ ಎಂದು ಹೇಳಿಕೆ ಕೊಟ್ಟಿರುವ ಲಾರೆನ್ಸ್ ಬಿಷ್ಣೋಯಿಯ ಕಟು ನಿಲುವು ಅನೇಕ ಮಂದಿಯ ಎದೆಯಲ್ಲಿ ಅವಲಕ್ಕಿ ಕುಟ್ಟತೊಡಗಿದೆ. ಸದ್ಯದ ಪ್ರಕಾರ ಹಿಂದೂ ಧರ್ಮ ವಿರೋಧಿಗಳೇ ಆತನ ಟಾರ್ಗೆಟ್ ಎಂಬುದು ಸ್ಪಷ್ಟವಾಗಿದೆ. ಆತನ ಸುಪರ್ಧಿಯಲ್ಲಿ ದೇಶಾಧ್ಯಂತ 700 ಶೂಟರ್ ಗಳಿರುವ ಲೆಕ್ಕಾಚಾರವಿದ್ದು, ಯಾವ ಮೂಲೆಯಲ್ಲಿ ಯಾರ ತಲೆ ಸಿಡಿಯಲಿದೆಯೋ ಎಂಬ ಆತಂಕ ಮನೆಮಾಡಿದೆ.