ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಭಗವದ್ಗೀತೆ, ಬ್ರಾಹ್ಮಣರು ಹಾಗೂ ಆರೆಸ್ಸೆಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ನಾನು 40 ವರ್ಷಗಳ ಹಿಂದೆ ಚಿಂತನ ಗಂಗಾ ಎಂಬ ಪುಸ್ತಕ ಓದಿದೆ. ಈ ಪುಸ್ತಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂವಿಧಾನವಾಗಿದೆ. ಪುಸ್ತಕ ಮುದ್ರಣ ಮಾಡಿ ಜನರಿಗೆ ಹಂಚಿಕೆ ಮಾಡುತ್ತಾರೆ. ಅವರು ಕೊಟ್ಟ ಪುಸ್ತಕ ಎಷ್ಟು ಕೆಲಸ ಮಾಡುತ್ತದೆಂದರೆ ಪ್ರತಿಯೊಬ್ಬ ಬ್ರಾಹ್ಮಣರ ಮನೆಯಲ್ಲಿಯೂ ಭಗವದ್ಗೀತೆ ಪುಸ್ತಕದ ಪಕ್ಕದಲ್ಲಿಯೇ ಇದನ್ನು ಇಟ್ಟುಕೊಂಡಿರುತ್ತಾರೆ ಎಂದು ಆರೋಪಿಸಿದ್ದಾರೆ.
ಬ್ರಾಹ್ಮಣರು ಭಗವದ್ಗೀತೆಯನ್ನೂ ಓದುತ್ತಾರೆ. ಜೊತೆಗೆ ಆರ್‌ಎಸ್‌ಎಸ್‌ನವರು ಕೊಟ್ಟ ಚಿಂತನಗಂಗಾ ಪುಸ್ತಕವನ್ನು ಕೂಡ ಓದುತ್ತಾರೆ. ನಂತರ ರಾಷ್ಟ್ರದಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಗಮನಿಸಿ ಅದಕ್ಕೆ ವಿರುದ್ಧವಾದ ಪ್ರತಿದಾಳಿ ನಡೆಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಂತನಗಂಗಾ ಪುಸ್ತಕದಲ್ಲಿ ಮುದ್ರಿಸಿ ಮೆಲ್ಲ ಮೆಲ್ಲಗೆ ಎಲ್ಲ ಬ್ರಾಹ್ಮಣರಿಗೆ ಸಂದೇಶ ನೀಡುತ್ತಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.