ಬೆಂಗಳೂರು: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಸಿನಿಮಾ ಶೈಲಿಯಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿ ಮೃತದೇಹವನ್ನು ಮನೆಯಲ್ಲಿ ಹೂತು ಹಾಕಿದ್ದ ಘಟನೆ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಆಂಧ್ರದ ಕುಪ್ಪಂ ಮೂಲದ ನೆರಳೂರು ವಾಸಿ ಶ್ರೀನಾಥ್ (30) ಕೊಲೆಯಾದ ಮೃತ ದುರ್ದೈವಿ. ಪ್ರಭಾಕರ್, ಜಗದೀಶ್ ಕೊಲೆ ಮಾಡಿದ ಹಂತಕರು. ಶ್ರೀನಾಥ್ ಪ್ರಭಾಕರ್‌ನ ಸೋದರ ಸಂಬಂಧಿಯಾಗಿದ್ದು, ಅತ್ತಿಬೆಲೆ ಸಮೀಪದ ನೆರಳೂರಿನಲ್ಲಿ ಪತ್ನಿ, ಮಗವಿನೊಂದಿಗೆ ವಾಸವಿದ್ದರು.
ಇಂಜಿನಿಯರ್ ಆಗಿದ್ದ ಶ್ರೀನಾಥ್‌ಗೆ ಕೈತುಂಬ ಸಂಬಳ ಬರುತ್ತಿತ್ತು.ಹಣ ಡಬಲ್ ಮಾಡಿಕೊಡುತ್ತೀನಿ ಎಂದು ಪ್ರಭಾಕರ್ 40 ಲಕ್ಷ ಪಡೆದಿದ್ದ. ಇತ್ತೀಚೆಗೆ ಹಣ ವಾಪಾಸ್ ಕೊಡು ಎಂದು ಶ್ರೀನಾಥ್ ಕೇಳಿದ್ದಾನೆ. ಆಗ ಪ್ರಭಾಕರ್, ಶ್ರೀನಾಥ್ ಕೊಲೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿ ಹಣ ಕೊಡುತ್ತೀನಿ ಬಾ ಎಂದು ಆಂಧ್ರದ ಕುಪ್ಪಂಗೆ ಕರೆಸಿಕೊಂಡಿದ್ದಾನೆ.
ಶ್ರೀನಾಥ್ ಕುಪ್ಪಂಗೆ ಹೋಗುವ ಮುನ್ನ ಮನೆಯಲ್ಲಿ ಪತ್ನಿಗೆ ಹೇಳಿ ಹೋಗಿದ್ದ. ಶ್ರೀನಾಥ್ ಕುಪ್ಪಂನಲ್ಲಿರುವ ತನ್ನ ಮನೆಗೆ ಆರೋಪಿ ಪ್ರಭಾಕರ್‌ನನ್ನು ಕರೆಸಿಕೊಂಡು, ಹಣ ವಾಪಸ್ ನೀಡುವಂತೆ ಕೇಳಿದ್ದಾನೆ. ಆಗಾ ಪ್ರಭಾಕರ್ ಹಣ ಕೇಳುತ್ತೀಯಾ ಎಂದು ಅಲ್ಲಿಯೇ ಇದ್ದ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ, ಬಳಿಕ ಅದೇ ಮನೆಯಲ್ಲಿಯೇ ಗುಂಡಿ ತೆಗೆದು ಮುಚ್ಚಿದ್ದಾರೆ. ಇದಕ್ಕೆ ಪ್ರಭಾಕರ್ ಸ್ನೇಹಿತ ಜಗದೀಶ್ ಕೂಡ ಸಾಥ್ ಕೊಟ್ಟಿದ್ದಾನೆ.
ಕೊಲೆ ಮಾಡಿ ಏನು ಗೊತ್ತಿಲ್ಲದಂತೆ ನಾಟಕವಾಡಿದ್ದ ಪ್ರಭಾಕರ್. ಶ್ರೀನಾಥ್ ಪತ್ನಿ ಕೇಳಿದರು ನನಗೆ ಗೊತ್ತಿಲ್ಲ ಎಂದಿದ್ದ. ಎರಡು ದಿನವಾದರು ಗಂಡ ಮನೆಗೆ ಬಾರದೆ ಇದ್ದಾಗ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅತ್ತಿಬೆಲೆ ಪೊಲೀಸರು ಪ್ರಭಾಕರ್ ಮತ್ತು ಜಗದೀಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾಗ ಕೊಲೆ ರಹಸ್ಯ ಬಯಲಾಗಿದೆ. ಬಳಿಕ ಕುಪ್ಪಂ ತಹಶೀಲ್ದಾರ್ ನೇತೃತ್ವದಲ್ಲಿ ಮೃತದೇಹವನ್ನು ಹೊರತೆಗೆದ ಅತ್ತಿಬೆಲೆ ಪೊಲೀಸರು ಸದ್ಯ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಪತಿ, ಅತ್ತೆಯ ಕಿರುಕುಳಕ್ಕೆ ಮನನೊಂದ ಗೃಹಿಣಿ ; ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ



















