ಬೆಂಗಳೂರು : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಪತಿ ಮಹೇಂದ್ರಗೆ ಅಕ್ರಮ ಸಂಬಂಧ ಇತ್ತಾ ಎಂಬ ಶಂಕೆ ಪೊಲೀಸ್ ತನಿಖೆಯಲ್ಲಿ ವ್ಯಕ್ತವಾಗಿದೆ.
ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಕೊಲೆ ಆರೋಪಿ ಡಾ.ಮಹೇಂದ್ರ ಅವರ ಎರಡೂ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ರಿಲೇಶನ್ಶಿಪ್ನಲ್ಲಿದ್ದವಳ ಜೊತೆ ಮಾತನಾಡಲು ಆರೋಪಿ ಬೇರೆ ಮೊಬೈಲ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದ್ದು, ಈ ಹಿನ್ನೆಲೆ ಆರೋಪಿಯ ಎರಡೂ ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆ ಪ್ಲ್ಯಾನ್ನಲ್ಲಿ ಆಕೆಯ ಕೈವಾಡ ಇದ್ಯಾ? ಆಕೆ ಮತ್ತು ಮಹೇಂದ್ರ ಇಬ್ಬರು ಸೇರಿ ಕೊಲೆ ಸ್ಕೆಚ್ ಹಾಕಿದ್ರಾ? ಎಂಬುವುದರ ಕುರಿತು ತನಿಖೆ ನಡೆಸಲಿರುವ ಪೊಲೀಸರು, ಆರೋಪಿ ಮೊಬೈಲ್ನನ್ನು FSLಗೆ ಕಳುಹಿಸಲು ಸಜ್ಜಾಗಿದ್ದಾರೆ.
ವಿವಿಧ ಆಯಾಮಗಳಲ್ಲಿ ತನಿಖೆ | ಮಾರತ್ಹಳ್ಳಿ ಪೊಲೀಸರು ಪ್ರಕರಣವನ್ನು ಮೂರು ಆಯಾಮಗಳಲ್ಲಿ ತನಿಖೆ ಮಾಡಲು ನಿರ್ಧರಿಸಿದ್ದಾರೆ. ಮೊದಲನೇಯದಾಗಿ ಆರೋಪಿಗೆ ಅಕ್ರಮ ಸಂಬಂಧವಿರೋ ಬಗ್ಗೆ ಸಂಶಯದ ಆಧಾರಿತ ತನಿಖೆ, ಎರಡನೇಯದಾಗಿ ಹಣಕಾಸಿನ ವಿಚಾರದ ಆಯಾಮದಲ್ಲಿ ತನಿಖೆ, ಹಾಗು ಮೂರನೆಯದಾಗಿ ಅನಸ್ತೇಷಿಯಾ ಬಳಕೆಗೆ ಡ್ರಗ್ಸ್ ಎಲ್ಲಿಂದ ತಂದಿದ್ದರು ಅನ್ನೋ ಆಯಾಮಾದಲ್ಲಿ ತನಿಖೆ ನಡೆಸಲಿದ್ದಾರೆ. ಜೊತೆಗೆ ಆರೋಪಿಯ ಆರು ತಿಂಗಳ ಪೋನ್ ಕಾಲ್ಗಳನ್ನು ಸಿಡಿಆರ್ಗೆ ಹಾಕಿದ್ದಾರೆ.