ಬೆಂಗಳೂರು : ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶಾಸಕ ಮುನಿರತ್ನ ಅಚ್ಚರಿಯ ಬೆಳವಣಿಗೆಯಲ್ಲಿ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಯಾವುದೇ ಅಧಿಕೃತ ಹೇಳಿಕೆ ನೀಡದೆ, ಸದ್ದಿಲ್ಲದೆ ಏಕಾಂಗಿಯಾಗಿ ತೆರಳಿ ನಾಮಪತ್ರ ವಾಪಸ್ ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಡಿಕೆ ಶಿವಕುಮಾರ್ ಭಯದಿಂದಲೇ ಮುನಿರತ್ನ ಅವರು ಸ್ಪರ್ಧೆಯಿಂದ ಹಿಂದೆ ಸರಿದರೇ ಎಂಬ ಚರ್ಚೆಗಳು ರಾಜಕೀಯ ಹಾಗೂ ಚಿತ್ರರಂಗದ ವಲಯದಲ್ಲಿ ಜೋರಾಗಿದೆ. ಮುನಿರತ್ನ ಅವರ ಹಿಂದೆ ಸರಿಕೆಯಿಂದ ಫಿಲ್ಮ್ ಚೇಂಬರ್ ಚುನಾವಣೆ ಇದೀಗ ಕಾಂಗ್ರೆಸ್–ಬಿಜೆಪಿ ನೇರ ಫೈಟಿಗೆ ವೇದಿಕೆಯಾಗಿದ್ದು, ಚೇಂಬರ್ ಒಳಗೆ ಸಿದ್ದರಾಮಯ್ಯ ವರ್ಸಸ್ ಡಿಕೆ ಶಿವಕುಮಾರ್ ಬಣಗಳ ನಡುವಿನ ಪೈಪೋಟಿ ಫಿಕ್ಸ್ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಡಿಕೆಶಿ ಬೆಂಬಲಿತ ಭಾಮಾ ಹರೀಶ್ ಹಾಗೂ ಸಿದ್ದರಾಮಯ್ಯ ಬಣದ ಜಯಮಾಲ ನಡುವೆ ತೀವ್ರ ಸ್ಪರ್ಧೆ ನಡೆಯಲಿದ್ದು, ಈ ಚುನಾವಣೆ ರಾಜಕೀಯ ರಂಗದ ಶಕ್ತಿ ಪ್ರದರ್ಶನವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಕೆ.ಸಿ ಜನರಲ್ ಆಸ್ಪತ್ರೆಯನ್ನು ವೈದ್ಯಕೀಯ, ಸಂಶೋಧನಾ ಮಹಾವಿದ್ಯಾಲಯವಾಗಿ ಉನ್ನತ್ತೀಕರಿಸಲು ಸರ್ಕಾರ ಸಜ್ಜು



















