ಚಿಕ್ಕಮಗಳೂರು: ತನ್ನ ಪತ್ನಿಯೊಂದಿಗೆ ನಗರಸಭೆ ಸದಸ್ಯನೊಬ್ಬ ಹೋಗುತ್ತಿರುವುದನ್ನು ಕಂಡ ಪತಿ ಪ್ರಶ್ನಿಸಿದ್ದಕ್ಕೆ ನಡು ರಸ್ತೆಯಲ್ಲೇ ಪತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಕುಂಬಾರ ಬೀದಿಯಲ್ಲಿ ನಡೆದ ಈ ಘಟನೆಯಲ್ಲಿ, ಅನೈತಿಕ ಸಂಬಂಧ ಪ್ರಶ್ನಿಸಿದ ಕಾರಣಕ್ಕೆ ಕೌನ್ಸಿಲರ್ ಲಕ್ಷ್ಮಣ್ ಎಂಬಾತ ಆಟೋ ಚಾಲಕ ಚಂದ್ರಶೇಖರ್ ಮಲ್ಲೇಗೌಡ ಮೇಲೆ ದೊಣ್ಣೆ ಹಿಡಿದು ಹಲ್ಲೆ ನಡೆಸಿದ್ದಾನೆ. ಈ ವೇಳೆ ಪತ್ನಿ ಪವಿತ್ರ ಕೂಡ ಕೌನ್ಸಿಲರ್ ಜೊತೆ ಸೇರಿ ತನ್ನ ಪತಿಗೆ ಮನಬಂದಂತೆ ಥಳಿಸಿರುವ ಆರೋಪ ಕೇಳಿಬಂದಿದೆ.
ಹಲ್ಲೆಯಿಂದ ಗಾಯಗೊಂಡ ಚಂದ್ರಶೇಖರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಕ್ರೋಶ ಉಂಟುಮಾಡಿವೆ.
ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪವಿತ್ರ ಹಾಗೂ ಕೌನ್ಸಿಲರ್ ಲಕ್ಷ್ಮಣ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಘಟನೆ ನಗರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಇದನ್ನೂ ಓದಿ : ಥೆರಪಿಸ್ಟ್ ಕೊಲೆ ಪ್ರಕರಣದಲ್ಲಿ ರೋಚಕ ಟ್ವಿಸ್ಟ್.. ಬಾಯ್‌ಫ್ರೆಂಡ್ ಜೊತೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ


















