ಸೈಯದ್ ಮುಷ್ತಾಕ್ ಅಲಿ ಟಿ20 ಫೈನಲ್ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಮುಂಬಯಿ ತಂಡ ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಪೃಥ್ವಿ ಶಾ ಉತ್ತಮ ಪ್ರದರ್ಶನದಿಂದಾಗಿ ಫೈನಲ್ ಪ್ರವೇಶಿಸಿದೆ.
ಮುಂಬಯಿ ತಂಡವು ಸೆಮಿಫೈನಲ್ ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಬರೋಡಾ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿದೆ. ಈ ಮೂಲಕ ಮುಂಬೈ ತಂಡ ಎರಡನೇ ಬಾರಿಗೆ ಈ ಟ್ರೋಫಿಯ ಫೈನಲ್ ತಲುಪಿದೆ. 2022-23ರಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದ ಮುಂಬೈ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿತ್ತು. ಈಗ ಮತ್ತೊಮ್ಮೆ ಫೈನಲ್ ತಲುಪಿದೆ. ಇನ್ನೊಂದೆಡೆ ಸೋಲುವುದರ ಮೂಲಕ 6ನೇ ಬಾರಿಗೆ ಫೈನಲ್ ಆಡುವ ಅವಕಾಶವನ್ನು ಬರೋಡ ಕಳೆದುಕೊಂಡಿದೆ.
ಗೆಲುವಿನಲ್ಲಿ ಅಜಿಂಕ್ಯ ರಹಾನೆ ಅವರ ಪಾತ್ರ ಅಪಾರವಾಗಿತ್ತು. ಈ ಪಂದ್ಯದಲ್ಲೂ ತಮ್ಮ ಬ್ಯಾಟಿಂಗ್ ಝಳಿಸಿಪಿದರು. ಅಯ್ಯರ್ ಅವರೊಂದಿಗೆ ಎರಡನೇ ವಿಕೆಟ್‌ಗೆ 88 ರನ್‌ಗಳ ಜೊತೆಯಾಟ ನೀಡಿದರು. ರಹಾನೆ 56 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 98 ರನ್ ಗಳಿಸಿ ಕೇವಲ 2 ರನ್ಗಳಿಂದ ಶತಕ ವಂಚಿತಾದರು.
ರಹಾನೆ ಜೊತೆ ಉತ್ತಮ ಜೊತೆಯಾಟ ಕಟ್ಟಿದ ಶ್ರೇಯಸ್ ಅಯ್ಯರ್ ಕೂಡಲೇ 30 ಎಸೆತಗಳಲ್ಲಿ 46 ರನ್ ಗಳ ಕಾಣಿಕೆ ನೀಡಿದರು. ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಸೆಮಿಫೈನಲ್‌ನಲ್ಲಿಯೂ ವಿಫಲರಾದರು.
ಅಂತಿಮವಾಗಿ ಮುಂಬೈ ತಂಡ 17.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತ್ತು. ಈ ಮೂಲಕ ಮುಂಬಯಿ ತಂಡವು 6 ವಿಕೆಟ್ ಗಳ ಭರ್ಜರಿ ಜಯ ಗಳಿಸಿತು.