ಐಪಿಎಲ್ 2025ರಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ ತನ್ನ ತವರಿನಲ್ಲಿ ಹೀನಾಯ ಸೋಲು ಕಂಡಿದೆ.
ಮುಂಬೈ ಇಂಡಿಯನ್ಸ್ (MI) ತಂಡದ ವಿರುದ್ಧ ಹೈದರಾಬಾದ್ ತಂಡ 7 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ತಂಡದ ಪರ ಕ್ಲಾಸೆನ್ 71 ರನ್ ಮತ್ತು ಅಭಿನವ್ 43 ರನ್ ಗಳಿಸಿದರು. ಮುಂಬೈ ಪರ ಟ್ರೆಂಟ್ ಬೌಲ್ಟ್ ನಾಲ್ಕು ವಿಕೆಟ್ ಪಡೆದರೆ, ದೀಪಕ್ ಚಹಾರ್ ಎರಡು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ (Rohit Sharma) ಅರ್ಧ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮೊದಲು ಬ್ಯಾಟ್ ಮಾಡಿದ್ದ ಹೈದರಾಬಾದ್ ಆರಂಭಿಕ ಆಘಾತ ಕಂಡಿತು. 20 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತು. ಟ್ರಾವಿಸ್ ಹೆಡ್ (0), ಅಭಿಷೇಕ್ ಶರ್ಮಾ (8), ಇಶಾನ್ ಕಿಶನ್ (1) ಮತ್ತು ನಿತೀಶ್ ರೆಡ್ಡಿ (2) ದೊಡ್ಡ ಸ್ಕೋರ್‌ಗಳನ್ನು ಗಳಿಸುವಲ್ಲಿ ವಿಫಲರಾದರು. ಹೆನ್ರಿಕ್ ಕ್ಲಾಸೆನ್ ಮತ್ತು ಅಭಿನವ್ ಮನೋಹರ್ ತಂಡದ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡರು. ಇವರಿಬ್ಬರ ನಡುವೆ ಆರನೇ ವಿಕೆಟ್‌ಗೆ 99 ರನ್‌ಗಳ ಬೃಹತ್ ಜೊತೆಯಾಟ ನೀಡಿದರು.
ಕ್ಲಾಸೆನ್ 71 ರನ್, ಅಭಿನವ್ ಮನೋಹರ್ 43 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಮುಂಬೈ 15.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಗೆಲುವು ಸಾಧಿಸಿತು. ಮುಂಬೈ ಪರ ರೋಹಿತ್ ಶರ್ಮಾ 70 ರನ್ ಹಾಗೂ ಸೂರ್ಯಕುಮಾರ್ ಯಾದವ್ ಅಜೇಯ 40 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮುಂಬೈ ಮೇಲಕ್ಕೆ ಜಿಗಿದು ಮೂರನೇ ಸ್ಥಾನ ಗಳಿಸಿದೆ.



















