ನಟಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೆ. 9ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅವರ ಮುದ್ದಾದ ಪುತ್ರಿ ನೋಡಲು ಉದ್ಯಮಿ ಮುಕೇಶ್ ಅಂಬಾನಿ ತೆರಳಿದ್ದಾರೆ.
ತಮ್ಮ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿ ಹಂಚಿಕೊಂಡಿದ್ದರು. ಸೋಮವಾರ ರಣವೀರ್ ಸಹೋದರಿ ರಿತಿಕಾ ಭವ್ನಾನಿ ತಮ್ಮ ಸೊಸೆಯನ್ನು ಆಸ್ಪತ್ರೆಗೆ ಬಂದು ಭೇಟಿ ಮಾಡಿದ್ದರು ಎನ್ನಲಾಗಿದೆ. ಈಗ ದೇಶದ ಶ್ರೀಮಂತರ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಬಂದು ಮಗಳನ್ನು ನೋಡಿದ್ದಾರೆ.
ರಣವೀರ್-ದೀಪಿಕಾ ಅವರ ಮಗಳನ್ನು ಕಾಣಲು ಮುಖೇಶ್ ಅಂಬಾನಿ ಆಸ್ಪತ್ರೆಗೆ ಬಂದಿದ್ದಾರೆ. ಕಟ್ಟುನಿಟ್ಟಿನ ಭದ್ರತೆಯಲ್ಲಿ ಅವರ ಕಾರು ಆಸ್ಪತ್ರೆ ತಲುಪುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂಬಾನಿ ಕುಟುಂಬ ಈ ದಂಪತಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ರಣವೀರ್ ಮತ್ತು ದೀಪಿಕಾ ಭಾಗವಹಿಸಿದ್ದರು. ದೀಪಿಕಾ ಮಗಳಿಗೆ ಜನ್ಮ ನೀಡಿದ ಆಸ್ಪತ್ರೆ ಕೂಡ ಮುಖೇಶ್ ಮತ್ತು ನೀತಾ ಅಂಬಾನಿ ಒಡೆತನದಲ್ಲಿದೆ.
ರಣವೀರ್‌ಗೆ ಮಗಳು ಬೇಕು ಎಂದು ಆಸೆಪಟ್ಟು ಕೊನೆಗೂ ದೇವರು ಅವರ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಮಗಳು ಹುಟ್ಟಿದ ನಂತರ, ರಣವೀರ್ ಮತ್ತು ದೀಪಿಕಾ Instagram ಅಲ್ಲಿ ಪೋಸ್ಟ್ ಅನ್ನು ಬರೆದಿದ್ದಾರೆ. ‘ವೆಲ್ ಕಮ್ ಬೇಬಿ ಗರ್ಲ್’ ಎಂದು ಬರೆದು ಅದರ ಅಡಿಯಲ್ಲಿ ಹುಟ್ಟಿದ ದಿನಾಂಕವನ್ನು ನಮೂದಿಸಿದ್ದಾರೆ. ಈ ಪೋಸ್ಟ್‌ಗೆ ಬಾಲಿವುಡ್ ಇಂಡಸ್ಟ್ರಿಯ ಅನೇಕ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಅಭಿಮಾನಿಗಳು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.