ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ(US presidential election) ಅಭೂತಪೂರ್ವ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಪ್(Donald Trump) ಅವರು ಸೋಮವಾರ(ಜ.20) 47ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಅದಕ್ಕೆ ಮೊದಲು ಅವರು ವಿಶ್ವದ ಹಲವಾರು ಗಣ್ಯರಿಗೆ ಔತಣಕೂಟ ಏರ್ಪಡಿಸಿದ್ದರು. ಅದರಲ್ಲಿ ಮುಖೇಶ್ ಅಂಬಾನಿ ದಂಪತಿ ಪಾಲ್ಗೊಂಡಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ಮತ್ತು ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ (Nita Ambani) ಅವರು ವಾಷಿಂಗ್ಟನ್ ಡಿಸಿಯಲ್ಲಿ ಟ್ರಂಪ್ ಪ್ರಮಾಣ ವಚನ (Oath) ಸ್ವೀಕಾರ ಸಮಾರಂಭಕ್ಕೆ ಹೋಗಿದ್ದಾರೆ. ಪದಗ್ರಹಣಕ್ಕೂ ಒಂದು ದಿನ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದು, ಹಲವು ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ಟ್ರಂಪ್ ಅವರ ಪ್ರಮಾಣವಚನಕ್ಕೂ ಮೊದಲು “ಕ್ಯಾಂಡಲ್‌ಲೈಟ್ ಡಿನ್ನರ್” ಗೆ(Candlelight dinner) ಆಹ್ವಾನಿಸಲಾದ ಭಾರತೀಯ ಉದ್ಯಮಿಗಳಲ್ಲಿ ಅಂಬಾನಿ ದಂಪತಿಗಳು ಪ್ರಮುಖರು. ಔತಣಕೂಟದಲ್ಲಿ ಭಾರತದ ಹಲವು ಉದ್ಯಮಿಗಳು ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಮುಖೇಶ್ ಅಂಬಾನಿ (Mukesh Ambani) ದಂಪತಿಯನ್ನು ಡೊನಾಲ್ಡ್ ಟ್ರಂಪ್ ಮಾತನಾಡಿಸಿ ಕೈ ಕುಲುಕಿದ್ದು,ಕುಶಲೋಪರಿ ವಿಚಾರಿಸಿದ್ದಾರೆ. ಸದ್ಯ ಟ್ರಂಪ್ ಜೊತೆಗಿನ ಅಂಬಾನಿ ದಂಪತಿ ಫೋಟೊ ವೈರಲ್ ಆಗಿದೆ.