ಕೊಪ್ಪಳ: ಮುಸ್ಲಿಂ ಬಾಂಧವರು ಈಗಲೇ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳಿ. ಸಿದ್ದರಾಮಯ್ಯ ಅವರ ನಂತರ ನಮಗೆ ಚೊಂಬೆ ಗತಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಇರುವವರೆಗೆ ಮಾತ್ರ ನಮ್ಮ ಕೆಲಸಗಳು ನಡೆಯುತ್ತವೆ. ಹೀಗಾಗಿ ಮುಸ್ಲಿಂ ಸಮುದಾಯದವರು ಏನಾದರೂ ಕೆಲಸ ಆಗಬೇಕೆಂದರೆ, ಈಗಲೇ ಮಾಡಿಸಿಕೊಳ್ಳಿ. ಅವರ ನಂತರ ನಮಗೆ ಚೊಂಬೇ ಗತಿಯಾಗುತ್ತದೆ ಎಂದಿದ್ದಾರೆ.
ಸಿಎಂ ಬಳಿ ನಮ್ಮ ಮುಖಂಡರು ತಿಂಗಳಿಗೊಮ್ಮೆ ಹೋಗಿ, ನೂರಾರು ಕೋಟಿ ಅನುದಾನ ತನ್ನಿ. ತಂದು ನಮ್ಮ ಸಮಾಜದ ಕೆಲಸಗಳನ್ನು ಮಾಡಿ. ಆನಂತರ ನಮಗೆ ಯಾರೂ ಗೌರವ ನೀಡುವುದಿಲ್ಲ. ನಾನು ಸಿದ್ದರಾಮಯ್ಯ ಅವರನ್ನು ಮಾತ್ರ ನಮ್ಮ ನಾಯಕ ಎಂದು ಒಪ್ಪಿಕೊಂಡಿದ್ದೇನೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ನಾನು ಒಪ್ಪಿಲ್ಲ ಎಂದಿದ್ದಾರೆ.