ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ತನಿಖೆಯನ್ನು ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದಾರೆ. ಹೀಗಾಗಿ ಇಂದು ಕೋರ್ಟ್ ಗೆ ವರದಿ ಸಲ್ಲಿಸಬೇಕಾಗಿತ್ತು. ಆದರೆ, ಹಲವು ಕಾರಣಗಳಿಂದಾಗಿ ವರದಿ ಸಲ್ಲಿಕೆ ಮಾಡಿಲ್ಲ.
ಆದರೆ ಇಂದು ಸಲ್ಲಿಸಬೇಕಾಗಿದ್ದ ವರದಿಯನ್ನು ಲೋಕಾಯುಕ್ತ ಸಲ್ಲಿಸಿಲ್ಲ. ಲೋಕಾಯುಕ್ತ ಎಸ್ ಪಿಪಿ ವೆಂಕಟೇಶ್ ಅವರು ವರದಿ ಸಲ್ಲಿಸುವುದಕ್ಕಾಗಿ ಕಾಲಾವಕಾಶ ಕೋರಿದ್ದಾರೆ. ಮುಂದಿನ ಎರಡ್ಮೂರು ದಿನಗಳಲ್ಲಿ ವರದಿ ಸಲ್ಲಿಕೆ ಮಾಡುವುದಾಗಿ ಕೋರಿ ಮನವಿ ಮಾಡಿದ್ದಾರೆ. ಹೀಗಾಗಿ ಕೋರ್ಟ್ ವಿಚಾರಣೆಯನ್ನು ಫೆ. 24ಕ್ಕೆ ಮುಂದೂಡಲಾಗಿದೆ.
ಲೋಕಾಯುಕ್ತ ಎಸ್ ಪಿಪಿ ವೆಂಕಟೇಶ್ ಅರಭಟ್ಟಿ ಕೋರ್ಟ್ ಗೆ ಮನವಿ ಮಾಡಿದರು. ವಿಚಾರಣೆ ಮುಂದೂಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ (ಸೆಷನ್ಸ್ ಕೋರ್ಟ್) ಆದೇಶ ಹೊರಡಿಸಿದೆ.