ಮೈಸೂರು: ಸಂಸದ ಯದುವೀರ್ ಒಡೆಯರ್ ಅವರ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನಲ್ಲಿ ಅಭಿಮಾನಿಯು ರಂಗೋಲಿಯಲ್ಲಿ ಬೃಹತ್ ಭಾವಚಿತ್ರ ಬಿಡಿಸಿ ಶುಭಾಶಯ ಕೋರಿದ್ದಾರೆ.
ನಗರದಲ್ಲಿ ಕಲಾವಿದ ಪುನೀತ್ ಮತ್ತು ಅವರ ತಂಡದಿಂದ ಬೃಹತ್ ರಂಗೋಲಿ ಭಾವಚಿತ್ರ ರಚಿಸಲಾಗಿದ್ದು, ಎಲ್ಲರ ಗಮನ ಸೆಳೆಯಿತು. ಸುಮಾರು 8300 ಚದರ ಅಡಿಗಳ ವಿಸ್ತೀರ್ಣದಲ್ಲಿ ಮೂಡಿಬಂದ ಈ ಭಾವಚಿತ್ರದಲ್ಲಿ ಯದುವೀರ್ ಒಡೆಯರ್ ಅವರ ಪ್ರತಿಮೆ ಅದ್ಭುತವಾಗಿ ಮೂಡಿಬಂದಿದೆ.
ಈ ಸಂದರ್ಭ ಅಭಿಮಾನಿಗಳು “ಯದುವೀರ್ ಮಹಾರಾಜರಿಗೆ ಜೈ” ಎಂದು ಘೋಷಣೆ ಕೂಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ರಂಗೋಲಿ ಕಲಾಕೃತಿ ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



















