ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿಸೂರ್ಯ ಹಾಗೂ ಕಲಾವಿದೆ ಶಿವಶ್ರೀ ರಿಸೆಪ್ಷನ್ ಇಂದು ಅರಮನೆ ಮೈದಾನದಲ್ಲಿ ನಡೆದಿದೆ. ಅಭಿಮಾನಿಗಳಿಗಾಗಿ, ರಾಜಕೀಯ ಸ್ನೇಹಿತರಿಗಾಗಿ ರಿಸೆಪ್ಷನ್ ಏರ್ಪಡಿಸಲಾಗಿದೆ.
ಕಳೆದ ಮಾರ್ಚ್ 5 ಹಾಗೂ 6 ರಂದು ತೇಜಸ್ವಿ ಸೂರ್ಯ ವಿವಾಹ ಸಮಾರಂಭ ಬೆಂಗಳೂರು ಕನಕಪುರದ ರೆಸಾರ್ಟ್ ನಲ್ಲಿ ನಡೆದಿತ್ತು. ಈ ವೇಳೆ ಕುಟುಂಬಸ್ಥರು, ಆಪ್ತರು, ಸ್ನೇಹಿತರು, ರಾಜಕೀಯ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇಂದು ಬೆಂಗಳೂರಿನ ಅರಮನೆ ಮೈದಾನ ವೃಕ್ಷ, ಗಾಯತ್ರಿ ವಿಹಾರ, ಪ್ಯಾಲೇಸ್ ಮೈದಾನದಲ್ಲಿ ರಿಸೆಪ್ಷನ್ ನಡೆಯಲಿದೆ. ಆಹ್ವಾನದ ಜೊತೆಗೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.
ರಿಸೆಪ್ಷನ್‌ಗೆ ಎಲ್ಲರನ್ನೂ ಕರೆದ ಸಂಸದ
ಕಳೆದ ಎರಡ್ಮೂರು ದಿನದಿಂದ ಮದುವೆಗೆ ಶುಭಾಶಯ ಕೋರಿದ ಆಶೀರ್ವಾದ ಮಾಡಿದ ಎಲ್ಲರಿಗೂ ವಂದನೆಗಳು. ಬೆಂಗಳೂರಿನ ಅರಮನೆ ಮೈದಾನದ ರಿಸೆಪ್ಷನ್ ಕಾರ್ಯಕ್ರಮಕ್ಕೆ ನೀವೆಲ್ಲ ಬರುವವರು ಇದ್ದೀರಿ, ನಿಮ್ಮನ್ನು ಆಹ್ವಾನ ಮಾಡೋದಕ್ಕೆ ನಾನು, ಮನೆ ಸದಸ್ಯರು, ನಮ್ಮ ಕಾರ್ಯಕರ್ತರು, ಸ್ವಯಂ ಸೇವಕರು, ಇಡೀ ಕಚೇರಿ ಸಿಬ್ಬಂದಿ ನಿಮಗೋಸ್ಕರ ಕಾಯುತ್ತಿರುತ್ತೇವೆ ಎಂದಿದ್ದಾರೆ. ಆದರೆ ರಿಸೆಪ್ಷಗೆ ಬರುವಾಗ ಹೂವಿನ ಬೊಕ್ಕೆಗಳು, ಡ್ರೈಫ್ರೂಟ್ಸ್ ಗಿಫ್ಟ್ ಗಳನ್ನು ತರಬೇಡಿ ಎಂದು ಮನವಿ ಮಾಡಿದ್ದಾರೆ.
ಮದುವೆಗೆ ಬರಲು, ಯಾವುದೇ ವಿಐಪಿ ಪಾಸ್, ಸ್ಪೆಷಲ್ ಪಾಸ್ ಅಗತ್ಯ ಇಲ್ಲ, ಯಾವ ಎಂಟ್ರಿ-ಎಕ್ಸಿಟ್ ಎಂಬ ಗೊಂದಲವೂ ಇಲ್ಲ, ಯಾವುದೇ ಹೆಚ್ಚುವರಿ ವಿಶೇಷ ವ್ಯವಸ್ಥೆ ಮಾಡಿಲ್ಲ. ಎಲ್ಲರಿಗೂ ಕೂಡಾ ಸುಲಭವಾಗಿ ಬಂದು ನಮ್ಮನ್ನ ಮಾತನಾಡಿಸಿ, ಆಶೀರ್ವದಿಸಿ, ಸತ್ಯನಾರಾಯಣ ಪ್ರಸಾದ ತೆಗೆದುಕೊಂಡು ಊಟ ಂಅಡಿಕೊಂಡು ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ. ವಯಸ್ಸಾದವರಿಗೆ, ಸೀನಿಯರ್ ಸಿಟಿಜನ್ಸ್ ಗೆ, ದಿವ್ಯಾಂಗರಿಗೆ ವೀಲ್ ಚೇರ್ ವ್ಯವಸ್ಥೆಯನ್ನೂ ಕೂಡಾ ಕಾರ್ಯಕರ್ತರು ಮಾಡಿದ್ದಾರೆ. ಎಲ್ಲರೂ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.