ಬೆಂಗಳೂರು : ಹೆಬ್ಬಾಳದ ಕೆಂಪಾಪುರ ಬಳಿ ಅಕ್ರಮ ಬಾಂಗ್ಲಾ ವಲಸಿಗರು ಇರುವ ಕೊಳಚೆ ಪ್ರದೇಶಲಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಹತ್ತು ವರ್ಷಗಳಿಂದ ರೋಹಿಂಗ್ಯಾಗಳು ಇಲ್ಲಿ ವಾಸವಿದ್ದಾರೆ. ಇಲ್ಲಿ ವಾಸವಿರುವ ಅಕ್ರಮ ವಲಸಿಗರ ಆಧಾರ್ ಕಾರ್ಡ್ ಪರಿಶೀಲನೆ ನಡೆಸಿದ ಶೋಭಾ ಕರಂದ್ಲಾಜೆ, ಇವೆಲ್ಲಾ ನಕಲಿ ಆಧಾರ್ ಕಾರ್ಡ್, ಸಾವಿರಾರು ಅಕ್ರಮ ಬಾಂಗ್ಲಾ ವಲಸಿಗರು ಇಲ್ಲಿ ವಾಸ ಮಾಡುತ್ತಿದ್ದಾರೆ. ಇವರ ಬಗ್ಗೆ ಪೊಲೀಸರು ಪರಿಶೀಲನೆ ಮಾಡಿ ಗಡೀಪಾರು ಮಾಡುವಂತೆ ಶೋಭ ಸೂಚನೆ ನೀಡಿದರು.
ತಗಡಿನ ನೂರಾರು ಶೆಡ್ ನಿರ್ಮಿಸಿಕೊಂಡು ಅಕ್ರಮವಾಗಿ ವಾಸಿಸುತ್ತಿರುವ ಈ ರೋಹಿಂಗ್ಯಾಗಳ ವಿರುದ್ಧ ಎನ್‌ಐಎ ಗೆ ಪತ್ರ ಬರೆಯುತ್ತೇನೆ. ಕೇಂದ್ರಕ್ಕೂ ಪತ್ರ ಬರೆಯುತ್ತೇನೆ. ಶೀಘ್ರ ಕ್ರಮವಾಗಲೇ ಬೇಕು ಎಂದು ಅವರು ಹೇಳಿದರು.



















