ಬೆಂಗಳೂರು: ನಕಲಿ ಲೈಕ್ ನಿಂದಾಗಿ ಸಂಸದ ಪಿ.ಸಿ. ಮೋಹನ್ ಗರಂ ಆಗಿರುವ ಘಟನೆ ನಡೆದಿದೆ.
ಕನ್ನಡ ಹೋರಾಟಗಾರರನ್ನು ಹೀಯಾಳಿಸಿದ ಪೋಸ್ಟ್ ಗೆ ಪಿ.ಸಿ. ಮೋಹನ್ ಲೈಕ್ ಕೊಟ್ಟಂತೆ ಎಡಿಟ್ ಮಾಡಿರುವ ಪೋಸ್ಟ್ ಒಂದು ವೈರಲ್ ಆಗಿದೆ. ಈಗ ಕನ್ನಡ ಹೋರಾಟಗಾರರನ್ನು ಹೀಯಾಳಿಸಿದ ಪೋಸ್ಟ್ ಗೆ ಲೈಕ್ ಮಾಡಿದ್ದಾರೆಂದು ವಿರೋಧ ವ್ಯಕ್ತವಾಗುತ್ತಿದೆ.

ಇದನ್ನು ಗಮನಿಸಿದ ಸಂಸದರು ಅದು ನಕಲಿ ಎಂದು ಹೇಳಿದ್ದಾರೆ. ಅಲ್ಲದೇ, ನಕಲಿ ಲೈಕ್ ಸೃಷ್ಟಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ನಿರ್ಧರಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಕನ್ನಡ ಮಾತನಾಡಲ್ಲ ಅಂತ ಎಸ್ ಬಿಐ ಬ್ರ್ಯಾಂಚ್ ಮ್ಯಾನೇಜರ್ ದರ್ಪ ತೋರಿದ್ದರು. ಇದನ್ನು ಪ್ರಶ್ನಿಸಿ ಕನ್ನಡ ಪರ ಹೋರಾಟಗಾರರು ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ್ದರು.
ಕನ್ನಡ ಹೋರಾಟಗಾರ ಪ್ರತಿಭಟನೆಯನ್ನು ಗೂಂಡಾವರ್ತನೆಗೆ ಹೋಲಿಸಿ, ಹೋರಾಟಗಾರರನ್ನು ಜೈಲಿಗೆ ಅಟ್ಟಿ ಎಂದು ಸನಾತನ ಎನ್ನುವ ನಕಲಿ ಖಾತೆ ಟ್ವೀಟ್ ಮಾಡಿತ್ತು. ಆ ಪೋಸ್ಟ್ ಗೆ ಸಂಸದ ಪಿಸಿ ಮೋಹನ್ ಲೈಕ್ ಮಾಡಿರುವಂತೆ ಮತ್ತೊಂದು ನಕಲಿ ಪೋಸ್ಟ್ ಎಡಿಟ್ ಮಾಡಿರುವ ಆರೋಪ ಕೇಳಿ ಬಂದಿದೆ. ಆ ಬಳಿಕ ಕನ್ನಡಪರ ಹೋರಾಟ ಮಾಡಿದವರಿಗೆ ಸಂಸದರು ಅಪಮಾನ ಮಾಡಿದ್ದಾರೆಂದು ಟೀಕೆ ವ್ಯಕ್ತವಾಗಿತ್ತು.
