ತುಮಕೂರು : ಹಾಡಹಗಲೇ ಸಿನಿಮೀಯ ರೀತಿ ಜ್ಯುವಲರಿ ಶಾಪ್‌ಗೆ ನುಗ್ಗಿದ ಗ್ಯಾಂಗ್‌ವೊಂದು ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಗಿಯಾಗಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳದ ಬೆಂಚೆಗೇಟ್ ಬಳಿ ಇರುವ ಜಗದಂಬಾ ಜ್ಯುವೆಲರಿ ಅಂಗಡಿಯಲ್ಲಿ ನಡೆದಿದೆ.
ಫೆ. 22ರ ಮಧ್ಯಾಹ್ನ ಜಗದಂಬಾ ಜ್ಯುವೆಲರಿ ಅಂಗಡಿ ಒಳಗೆ ಎಂಟ್ರಿಯಾದ ಖದೀಮರ ಗ್ಯಾಂಗ್‌ವೊಂದು ಅಂಗಡಿಯಲ್ಲಿದ್ದವರಿಗೆ ಖಾರದ ಪುಡಿ ಎರಚಿ, ಶಟರ್ ಕ್ಲೋಸ್ ಮಾಡಿ ಅಂಗಡಿಯಲ್ಲಿದ್ದ 100 ಗ್ರಾಂ ಚಿನ್ನ, ಒಂದುವರೆ ಕೆಜಿ ಬೆಳ್ಳಿ ಸೇರಿ ಸುಮಾರು26 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ ಕೇವಲ ಹತ್ತು ನಿಮಿಷದಲ್ಲಿ ಪರಾರಿಯಾಗಿದ್ದಾರೆ. ಈ ವೇಳೆ ಅಂಗಡಿಯಲ್ಲಿದ್ದ ಮಾಲೀಕ ದಿನೇಶ್ ಹಾಗೂ ಆತನ ಅಜ್ಜಿಗೆ ಹಲ್ಲೆ ಮಾಡಿದ್ದಾರೆ.
ದೂರು ಬಂದ ಕೂಡಲೇ ಅಲರ್ಟ್ ಆದ ಪೊಲೀಸರು, ಶಿರಾ ಡಿವೈಎಸ್ ಪಿ ಶೇಖರ್ ನೇತೃತ್ವದಲ್ಲಿ ಕಳ್ಳಂಬೆಳ್ಳ ಪಿಎಸ್ಐ ಭೈರೆಗೌಡ ತಂಡದಿಂದ ಹಾಗೂ ಸ್ಥಳೀಯ ಯುವಕರ ಸಹಾಯದಿಂದ ಬೊಲೇರೋ ಕಾರ್ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ, ಕೆಲವೇ ಗಂಟೆಗಳಲ್ಲಿ ಆರೋಪಿಗಳ ಖೆಡ್ಡಕ್ಕೆ ಖೆಡವಿದ್ದಾರೆ.
ಆರೋಪಿಗಳ ಚೇಸ್ ಮಾಡಿ ಹುಯ್ಯಲು ದೊರೆ ಅರಣ್ಯ ಪ್ರದೇಶದಲ್ಲಿ ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಅರವಿಂದ್, ದುಂಗರ್ ಸಿಂಗ್, ಮಹೇಂದ್ರ ಸಿಂಗ್, ಮಧು ಸಿಂಗ್ ಬಂಧಿತ ಆರೋಪಿಗಳು ಖದೀಮರಿಂದ ಕದ್ದ ಸಂಪೂರ್ಣ ಚಿನ್ನಾಭರಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ವಿಶ್ವ ಚಾಂಪಿಯನ್ ಭಾರತ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಸಜ್ಜು | ಹೀಲಿ ವಿದಾಯ ಸರಣಿಗೂ ವಿಶೇಷ ಮಹತ್ವ



















