ಬೆಂಗಳೂರು: ಆನ್‌ಲೈನ್ ನಲ್ಲಿ ಹೂಡಿಕೆ ಮಾಡಿಸಿಕೊಂಡು ಕೋಟ್ಯಂತರ ವಂಚಿಸುತ್ತಿದ್ದ ಜಾಲವನ್ನು ಕೆಂಗೇರಿ ಪೊಲೀಸ ಪತ್ತೆ ಮಾಡಿ, ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ದೇಶ, ವಿದೇಶಗಳ ಸಾರ್ವಜನಿಕರಿಗೆ ಪೇಸ್ ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಮೂಲಕ ಹೂಡಿಕೆ ಮಾಡಲು ಪ್ರೇರಣೆ ನೀಡಿ, ಹೂಡಿಕೆಯಿಂದ ಹೆಚ್ಚು ಲಾಭ ನೀಡುವುದಾಗಿ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಲಾಗಿದೆ.

ಸೋಮವಾರ ಏಳು ಕಡೆ ದಾಳಿ ನಡೆಸಿ ಪರಿಶೀಲನೆ ಮಾಡಿದ ಪೊಲೀಸರು, 19 ಲ್ಯಾಪ್‌ಟಾಪ್, 40 ಮೊಬೈಲ್ ಪೋನ್, 11 ಪೆನ್ ಡ್ರೈವ್, 42 ಸಿಮ್ ಕಾರ್ಡ್, 4 ಐಪ್ಯಾಡ್, 2 ಹಾರ್ಡ್ ಡಿಸ್ಕ್, 5 ಸಿಪಿಯು, 13 ಸೀಲುಗಳು, 10 ಮೆಮೊರಿ ಕಾರ್ಡ್ ಹಾಗೂ ವಿದೇಶಿ ಕರೆನ್ಸಿ. ಕರೆನ್ಸಿ ಕೌಟಿಂಗ್ ಮೆಷಿನ್, ಆರು ಕೋಟಿ ಬೆಲೆಬಾಳುವ ಸ್ಥಿರಾಸ್ತಿ ದಾಖಲೆಗಳು ಪತ್ತೆಯಾಗಿದೆ
ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.


















