ಪುತ್ತೂರು: ಲವ್, ಸೆಕ್ಸ್, ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ತಾಯಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಈ ವಿಷಯವಾಗಿ ಮಾತನಾಡಿದ ಅವರು, ನಾನು ಯಾವುದೇ ಸಂಘಟನೆಯಲ್ಲಿ ಸೇರಿದವಳಲ್ಲ. ನನ್ನ ಮಗಳಿಗೆ ನ್ಯಾಯ ಕೊಡಿಸುತ್ತೇವೆ ಎಂದು ಹೇಳಿದವರ ಬಳಿ ನಾನು ಹೋಗಿದ್ದೇನೆ ಎಂದು ಸಂತ್ರಸ್ತ ಯುವತಿಯ ತಾಯಿ ನಮಿತಾ ಹೇಳಿದ್ದಾರೆ.
ನನ್ನ ಮಗಳಿಗೆ ನ್ಯಾಯ ಒದಗಿಸಬೇಕು. ವಂಚನೆ ಮಾಡಿದ ಹುಡುಗನನ್ನು ತರಿಸಿ, ಅವನಿಗೆ ಶಿಕ್ಷೆ ಕೊಡಿ ಎಂದು ನಾನು ಹೇಳುವುದಿಲ್ಲ. ಅವನನ್ನು ನನ್ನ ಮಗಳ ಜೊತೆ ಮದುವೆ ಮಾಡಿಸಿ. ಹುಟ್ಟಿದ ಮಗುವಿಗೆ ಅದರ ತಂದೆಯ ಸ್ಥಾನ ತುಂಬಿಸಿ ಎಂದು ಮನವಿ ಮಾಡಿದ್ದಾರೆ.