ಬೆಂಗಳೂರು : ಟೀ ಗೆ ಇಲಿ ಪಾಷಾಣ ಬೆರೆಸಿ ಮಗುವಿಗೆ ಕುಡಿಸಿ ತಾಯಿಯೂ ಕುಡಿದು ಆತ್ಮಹತ್ಯಗೆ ಮುಂದಾದ ಘಟನೆ ಬೆಂಗಳೂರಿನ ತಿಗಳರಪಾಳ್ಯದಲ್ಲಿ ನಡೆದಿದೆ.
ಚಾರ್ವಿ(1.8 ವರ್ಷ ) ಸಾವನ್ನಪ್ಪಿದ ಮಗು. ಚಂದ್ರಿಕಾ (26) ಟೀಗೆ ಇಲಿ ಪಾಷಾಣ ಬೆರೆಸಿದ್ದ ತಾಯಿ.
ಗಂಡ ಯೋಗೇಶ್ ಜೊತೆ ಜಗಳ ಮಾಡಿಕೊಂಡ ಹಿನ್ನೆಲೆ ಸಾಯುವ ನಿರ್ಧಾರ ಮಾಡಿದ ಚಂದ್ರಿಕಾ, ಗಂಡ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದ ವೇಳೆ ಟೀಗೆ ಇಲಿ ಪಾಷಾಣ ಬೆರೆಸಿ ಮಗಳಿಗೆ ಕುಡಿಸಿ ತಾನೂ ಕುಡಿದಿದ್ದಾಳೆ.
ನಂತರ ಗಂಡನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಪತಿ ಕೂಡಲೆ ಮನೆಯ ಬಳಿ ಬಂದು ಮಗು ಮತ್ತು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಚಾರ್ವಿ ಸಾವನ್ನಪ್ಪಿದೆ.
ಆಸ್ಪತ್ರೆಯಲ್ಲಿ ಚಂದ್ರಿಕಾಳಿಗೆ ಚಿಕಿತ್ಸೆ ಮುಂದುವರೆದಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.