ಮಕ್ಕಳ ಹುಟ್ಟು ಹಬ್ಬ ಅಂದರೆ ತಂದೆ-ತಾಯಿಗಳಿಗೆ ಸಂಭ್ರಮ ಮನೆ ಮಾಡಿರುತ್ತದೆ. ಹೀಗೆ ಮಗನ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ತಾಯಿಯೊಬ್ಬರು ಖುಷಿಯಲ್ಲಿಯೇ ಇಹಲೋಕ ತ್ಯಜಿಸಿರುವ ಘಟೆ ನಡೆದಿದೆ.
ಮಗನ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ತಾಯಿ, ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಾರ್ಟಿಯಲ್ಲಿ ಹೃದಯಾಘಾತದಿಂದ ಮಹಿಳೆ ಕೆಳಗೆ ಬೀಳುತ್ತಿರುವುದನ್ನು ಸಿಸಿಟಿವಿಯಲ್ಲಿ ನೋಡಬಹುದು.
ವಲ್ಸಾದ್ ನ ರಾಯಲ್ ಶೆಲ್ಟರ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ಹುಟ್ಟು ಹಬ್ಬ ಆಚರಿಸಲು ಕುಟುಂಬಸ್ಥರು, ಸ್ನೇಹಿತರು ಆಗಮಿಸಿದ್ದರು. ವೀಡಿಯೊದಲ್ಲಿ ಕುಟುಂಬ ಸದಸ್ಯರು ನೃತ್ಯ ಮಾಡುವುದನ್ನು ಕೂಡ ಕಾಣಬಹುದು. ಮಹಿಳೆ, ಆಕೆಯ ಪತಿ ಮತ್ತು ಅವರ ಮಗು ವೇದಿಕೆಯ ಮೇಲೆ ನಿಂತಿರುವುದನ್ನು ಕಾಣಬಹುದು.
ನಂತರ ಮಹಿಳೆ ತಲೆ ಹಿಡಿದುಕೊಂಡು ಕೆಳಗೆ ಕುಸಿದು ಬೀಳುತ್ತಾರೆ. ಮಹಿಳೆಯು ಕುಸಿದು ಬೀಳುವ ಮೊದಲು ಗಂಡನ ಭುಜದ ಕಡೆಗೆ ವಾಲುತ್ತಿರುವುದನ್ನು ಕಾಣಬಹುದು. ಕೂಡಲೇ ಅಲ್ಲಿದ್ದವರು ಮಹಿಳೆಯ ಸಹಾಯಕ್ಕೆ ಧಾವಿಸುತ್ತಾರೆ. ನಂತರ ಆಸ್ಪತ್ರೆಗೆ ದಾಖಲಿಸಿದರೂ ಮಹಿಳೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.