ಮಂಡ್ಯ: ತಾಯಿ ಹಾಗೂ ಮಗ ಸಾವಿನಲ್ಲೂ ಒಂದಾದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯಲ್ಲಿ ಈ ಮನ ಕಲಕುವ ಘಟನೆ ನಡೆದಿದೆ. ಅಪಘಾತದಲ್ಲಿ ಮಗ ಕೃಷ್ಣಮೂರ್ತಿ (20) ಸಾವನ್ನಪ್ಪಿದ್ದ. ಮಗ ಸಾವನ್ನಪ್ಪಿದ ಸುದ್ದಿ ಕೇಳಿ ಆಘಾತಕ್ಕೊಳಗಾದ ತಾಯಿ ಕುಸಿದು ಬಿದ್ದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ತಾಯಿ ಮಹದೇವಮ್ಮ ಹೃದಯಾಘಾತಕ್ಕೆ ಬಲಿಯಾದ ತಾಯಿ. ತಾಯಿ ಮಗ ಇಬ್ಬರನ್ನೂ ಗ್ರಾಮಸ್ಥರು ಅಕ್ಕಪಕ್ಕವೇ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿನಲ್ಲೂ ಒಂದಾದ ತಾಯಿ-ಮಗನ ಅಂತ್ಯ ಸಂಸ್ಕಾರಕ್ಕೆ ಜನರು ಹರಿದು ಬಂದಿದ್ದರು.