ಬೀದರ್: ಭರ್ಜರಿ ಬೇಟೆಯಾಡಿರುವ ಪೊಲೀಸರು ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ 7 ಲಕ್ಷ ರೂ.ಗೂ ಅಧಿಕ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಔರಾದ್ (Aurad) ತಾಲೂಕಿನ ವಿಜಯನಗರ ತಾಂಡಾದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ತಂದಿಟ್ಟಿದ್ದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಇಲಾಖೆಗೆ ಸೇರಿದ ಶ್ವಾನವನ್ನು ನಾಯಿ ಪತ್ತೆ ಮಾಡಿದೆ.
ಪೊಲೀಸ್ ಇಲಾಖೆಗೆ ಸೇರಿರುವ ಡಾಬರ್ ಮ್ಯಾನ್ ತಳಿಯ ದೀಪಾ ಎನ್ನುವ ಶ್ವಾನ ಗಾಂಜಾವನ್ನು ಪತ್ತೆ ಹಚ್ಚಿದೆ. ಗಾಂಜಾಕೋರರು ಬಚ್ಚಿಟ್ಟಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾವನ್ನು ಪತ್ತೆ ಹಚ್ಚಿದ್ದು, ಓರ್ವ ಆರೋಪಿ ಬಂಧಿಸಲಾಗಿದೆ.
ಔರಾದ್ ತಾಲೂಕಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಹಾಗೂ ತಹಶೀಲ್ದಾರ್ ದಾಳಿ ನಡೆಸಿದ್ದರೂ ಗಾಂಜಾ ಪತ್ತೆಯಾಗಿರಲಿಲ್ಲ. ಆದರೆ, ಶ್ವಾನ ಮಾತ್ರ ಖದೀಮರ ಕಳ್ಳಾಟ ಬಯಲು ಮಾಡಿದೆ. ಸಂತಪೂರ್ (Santapur) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.